ಕನಕಪುರ, ಏ.19-ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 9 ಬಾಕ್ಸ್‍ಗಳಲ್ಲಿ ತುಂಬಿದ್ದ ಮದ್ಯವನ್ನು ಎಸ್‍ಎಸ್‍ಟಿ. ಸ್ಕ್ವಾಡ್ ತಂಡವು ವಶಪಡಿಸಿಕೊಂಡಿರುವ ಘಟನೆ ತಾಲ್ಲೂಕಿನ ಮರಳವಾಡಿ ಸಮೀಪದ ತಮಿಳುನಾಡು ಗಡಿಪ್ರದೇಶದ ದೊಡ್ಡೂರು ಚೆಕ್‍ಪೆÇೀಸ್ಟ್ ಬಳಿ ನಡೆದಿದೆ.
ದೊಡ್ಡೂರು ಗ್ರಾಮದ ಬಳಿ ಚುನಾವಣೆಗಾಗಿ ಸ್ಥಾಪಿಸಿರುವ ತಾತ್ಕಾಲಿಕ ತಪಾಸಣಾ ಕೇಂದ್ರದ ಬಳಿ ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾಗ ತಪಾಸಣೆ ವೇಳೆ ಈ ಅಕ್ರಮ ಮದ್ಯ ಸಾಗಾಟ ಕಂಡುಬಂದಿದೆ.
74,979 ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು,ದ್ವಿಚಕ್ರ ವಾಹನ ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ.
ಎಸ್‍ಎಸ್‍ಟಿ ತಂಡದ ಅಧಿಕಾರಿಗಳು ಕೂಡಲೇ ಕನಕಪುರ ಅಬಕಾರಿ ಇನ್ಸ್‍ಪೆಕ್ಟರ್ ಕೆ.ಶ್ರೀನಿವಾಸ್‍ರವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅಬಕಾರಿ ಅಧಿಕಾರಿ ಮಾಲು ಮತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಎಸ್.ಎಸ್.ಟಿ. ತಂಡದಲ್ಲಿ ಹೆಚ್.ಎಲ್.ನಾಗೇಂದ್ರ, ಪೆÇಲೀಸ್ ಸಿಬ್ಬಂಧಿ ಸಂತೋಷ್, ರಾಮಕೃಷ್ಣ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಅಬಕಾರಿ ಇನ್ಸ್‍ಪೆಕ್ಟರ್ ಕೆ.ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಾಗಣೆ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಮದ್ಯ ಸಾಗಣೆಗೆ ಯಾವುದೇ ರಹದಾರಿ ಇರುವುದಿಲ್ಲ. ಚುನಾವಣೆ ನೀತಿ ಸಂಹಿತೆಯ ಕಟ್ಟಾಜ್ಞೆ ಇರುವುದರಿಂದ ಗ್ರಾಮಾಂತರ ಪ್ರದೇಶದಲ್ಲಿ ಪರವಾನಗಿ ಇಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುವಂತಿಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.