ವ್ಹೀಲಿಂಗ್ ವೇಳೆ ನಿಯಂತ್ರಣ ತಪ್ಪಿ ಬ್ರಿಡ್ಜ್ ತಡೆಗೋಡೆಗೆ ಬೈಕ್ ಅಪ್ಪಳಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು, ಏ.19- ವ್ಹೀಲಿಂಗ್ ವೇಳೆ ನಿಯಂತ್ರಣ ತಪ್ಪಿ ಬ್ರಿಡ್ಜ್ ತಡೆಗೋಡೆಗೆ ಬೈಕ್ ಅಪ್ಪಳಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಾಲಹಳ್ಳಿ ಸಂಚಾರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಪಟ್ಟಿರುವ ಬೈಕ್ ಸವಾರನ ಹೆಸರು, ವಿಳಾಸ ತಿಳಿದು ಬಂದಿಲ್ಲ. ಸುಮಾರು 25 ವರ್ಷದಂತೆ ಕಾಣುವ ಈ ಯುವಕನ ಶವವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿಡಲಾಗಿದೆ.

ರಾತ್ರಿ 11.30ರ ಸಮಯದಲ್ಲಿ ಇಬ್ಬರು ಸವಾರರು ಸುಮಾರು ದೂರದಿಂದ ಆರ್‍ಎಕ್ಸ್ ಯಮಹಾ ಬೈಕ್‍ನಲ್ಲಿ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದಾಗ ಬಿ.ಎಲ್.ಸರ್ಕಲ್ ಬಳಿ ನಿಯಂತ್ರಣ ತಪ್ಪಿದ ಬೈಕ್ ಬ್ರಿಡ್ಜ್‍ನ ತಡೆಗೋಡೆಗೆ ಅಪ್ಪಳಿಸಿದೆ.

ಪರಿಣಾಮವಾಗಿ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಗಾಬರಿಯಾದ ಹಿಂಬದಿ ಸವಾರ ಸ್ಥಳದಿಂದ ಪರಾರಿಯಾಗಿದ್ದು , ಈ ದೃಶ್ಯ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.

ಸುದ್ದಿ ತಿಳಿದ ಜಾಲಹಳ್ಳಿ ಸಂಚಾರಿ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು , ಮೃತಪಟ್ಟಿರುವ ಬೈಕ್ ಸವಾರನ ವಿಳಾಸ ಹಾಗೂ ಪರಾರಿಯಾಗಿರುವ ಹಿಂಬದಿ ಸವಾರನಿಗಾಗಿ ಶೋಧ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ