ಅಹಮದಾಬಾದ್, ಏ.18-ಬ್ಯಾಂಕುಗಳಿಗೆ 2,654 ಕೋಟಿ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ಗುಜರಾತ್ನ ವಡೋದರಾ ಮೂಲದ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್(ಡಿಪಿಐಎಲ್) ಸಂಸ್ಥೆಯ ಮೂವರು ಪ್ರವರ್ತಕರನ್ನು(ಪ್ರಮೋಟರ್ಗಳು) ಸಿಬಿಐ ಮತ್ತು ಗುಜರಾತ್ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ.
ಡಿಪಿಐಎಲ್ನ ಮೂವರು ಪ್ರವರ್ತಕರಾದ-ಎಸ್.ಎನ್ ಭಟ್ನಾಗರ್ ಮತ್ತು ಅವರ ಇಬ್ಬರು ಪುತ್ರರಾದ ಅಮಿತ್ ಮತ್ತು ಸುಮಿತ್ ಅವರನ್ನು ನಿನ್ನೆ ತಡರಾತ್ರಿ ಉದಯ್ಪುರ್ನ ಹೋಟೆಲ್ ಒಂದರಲ್ಲಿ ಬಂಧಿಸಲಾಯಿತು.
ಎಲೆಕ್ಟ್ರಿಕ್ ಕೇಬಲ್ಗಳು ಮತ್ತು ಇತರ ವಿದ್ಯುತ್ ಸಾದನ-ಸಲಕರಣೆಗಳನ್ನು ತಯಾರಿಸುವ ಈ ಸಂಸ್ಥೆ ವಿವಿಧ ಭ್ಯಾಂಕುಗಳಿಗೆ 2,654 ಕೋಟಿ ರೂ.ಗಳ ಸಾಲಗಳನ್ನು ಎತ್ತುವಳಿ ಮಾಡಿ ಮರು ಪಾವತಿಸದೇ ವಂಚಿಸಿದೆ ಎಂಬ ಆರೋಪಗಳು ಮೇಲೆ ಈ ಮೂವರು ಉದ್ಯಮಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.