ದೃಷ್ಟಿಯಲ್ಲಿ ಗುರಿ ಇದೆ ಹಾಗೂ ಹೃದಯದಲ್ಲಿ ದೃಢ ಸಂಕಲ್ಪವಿದೆ – ಪ್ರಧಾನಮಂತ್ರಿ ನರೇಂದ್ರ ಮೋದಿ

ಸ್ಟಾಕ್‍ಹೋಮ್, ಏ.18-ನಾವು ಸಾಗಬೇಕಾದ ಹಾದಿ ದೂರವಿದೆ, ಆದರೆ ನಾವು ತಲುಪಬೇಕಾದ ಸ್ಥಳದ ಬಗ್ಗೆ ದೃಷ್ಟಿಯಲ್ಲಿ ಗುರಿ ಇದೆ ಹಾಗೂ ಹೃದಯದಲ್ಲಿ ದೃಢ ಸಂಕಲ್ಪವಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸ್ವೀಡನ್ ಭೇಟಿ ವೇಳೆ ರಾಜಧಾನಿ ಸ್ಟಾಕ್‍ಹೋಮ್‍ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಸರ್ಕಾರದ ದೃಷ್ಟಿಕೋನ ಮತ್ತು ದೂರದರ್ಶಿ
ಪರಿಕಲ್ಪನೆಗಳ ಬಗ್ಗೆ ವಿವರಿಸಿದರು.
ಸ್ವೀಡನ್‍ನಲ್ಲಿ ನಾವು ಭಾರತದ ಒಂದೇ ಒಂದು ರಾಯಭಾರಿ ಕಚೇರಿಯನ್ನು ಹೊಂದಿದ್ದೇವೆ ನಿಜ. ಆದರೆ ಇಲ್ಲಿರುವುದು ಕೇವಲ ಒಬ್ಬರೇ ರಾಯಭಾರಿ ಮಾತ್ರವಲ್ಲ. ನೀವೆಲ್ಲರೂ (ಸ್ವೀಡನ್‍ನಲ್ಲಿ ನೆಲೆಸಿರುವ ಭಾರತೀಯರು) ಭಾರತವನ್ನು ಪ್ರತಿನಿಧಿಸುವ ರಾಯಭಾರಿಗಳು ಎಂದು ಮೋದಿ ಬಣ್ಣಿಸಿದರು.
ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದ ಅವರು, ಸಬಲೀಕರಣವು ನಮ್ಮ ಹೊಸ ಸಾಧನವಾಗಿದೆ. ಸರ್ಕಾರವು ಜಾಮ್ (ಜೆಎಎಂ) ಎಂಬ ಸಾಮಾಜಿಕ ಕಲ್ಯಾಣ ಕಾರ್ಯಕ್ರಮದ ಮೂಲಕ ನವ ಕ್ರಾಂತಿ ಸೃಷ್ಟಿಸಿದೆ. ಜೆ-ಜನ್ ಧನ್ ಯೋಜನೆ, ಎ-ಆಧಾರ್ ಹಾಗೂ ಎಂ-ಮೊಬೈಲ್ ಈ ಮೂರನ್ನು ಸಮ್ಮಿಳಿತಗೊಳಿಸಿ ಸರ್ಕಾರದ ಸೌಲಭ್ಯ-ಸವಲತ್ತುಗಳನ್ನು ನೇರವಾಗಿ ಬಡವರಿಗೆ ವರ್ಗಾವಣೆ ಮಾಡಿದ್ದೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ