ನವದೆಹಲಿ, ಏ.18-ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಕತುವಾ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯ ಹೆಸರು ಪ್ರಕಟಿಸಿದ ಮಾಧ್ಯಮ ಸಂಸ್ಥೆಗಳಿಗೆ ದೆಹಲಿ ಹೈಕೋರ್ಟ್ ಇಂದು ತಲಾ 10 ಲಕ್ಷ ರೂ.ಗಳ ದಂಡ ವಿಧಿಸಿದೆ.
ಉಸ್ತುವಾರಿ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠವು ಇಂದು ಈ ಆದೇಶ ನೀಡಿ ಜಮ್ಮು ಮತ್ತು ಕಾಶ್ಮೀರ ಸಂತ್ರಸ್ತೆ ಪರಿಹಾರ ನಿಧಿಗೆ ತಪ್ಪಿತಸ್ಥ ಮಾಧ್ಯಮಗಳು ತಲಾ 10 ಲಕ್ಷ ರೂ.ಗಳನ್ನು ಠೇವಣಿಯಾಗಿ ಇಡುವಂತೆ ಸೂಚಿಸಿತು.
ಗ್ಯಾಂಗ್ರೇಪ್ ಮತ್ತು ಮರ್ಡರ್ ಆದ ಬಾಲಕಿಯ ಹೆಸರನ್ನು ಪ್ರಕಟಿಸಿದ್ದಕ್ಕಾಗಿ ಮೀಡಿಯಾ ಹೌಸ್ಗಳು ನ್ಯಾಯಾಲಯದ ಮುಂದೆ ಕ್ಷಮೆ ಕೋರಿವೆ.