ಸಕಲ ಜೀವಾತ್ಮರಿಗೆ ಲೇಸನ್ನು ಬಯಸಬೇಕೆಂಬ ಬಸವಣ್ಣನವರ ಸಂದೇಶವನ್ನು ಬದುಕಿನಲ್ಲಿ ನಿಷ್ಠೆಯಿಂದ ಪಾಲಿಸಬೇಕು: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ

ಬೆಂಗಳೂರು, ಏ.18-ಸದಾಕಾಲ ಸಮಾಜಮುಖಿಯಾಗಿ ತಮ್ಮ ಜೀವನದಲ್ಲಿ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಬೇಕೆಂಬ ಬಸವಣ್ಣನವರ ಸಂದೇಶವನ್ನು ತಮ್ಮ ಬದುಕಿನಲ್ಲಿ ನಿಷ್ಠೆಯಿಂದ ಪಾಲಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ನಗರದ ಭಾರತೀಯ ವಿದ್ಯಾಭವನದಲ್ಲಿ ಬಸವ ಜಯಂತಿ ಅಂಗವಾಗಿ ನಡೆಸಿ ಬಸವಶ್ರೀ ಮತ್ತು ವಚನ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ಸಂರಕ್ಷಣೆ ಮೂಲಕ ಮಾನವನ ಬದುಕಿನ ಪರಿವರ್ತನೆಗೆ ಮತ್ತು ವಿಕಾಸ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯ ಮತ್ತು ರಾಷ್ಟ್ರದ ಸಾಮಾಜಿಕ, ಶೈಕ್ಷಣಿಕ, ಕೃಷಿ, ಕೈಗಾರಿಕೆ, ಸಹಕಾರ ಹಾಗೂ ರಾಜಕೀಯ ವಲಯಗಳಲ್ಲಿ ಅಭಿವೃದ್ಧಿಗೆ ಕಾರಣರಾಗಿರುವ ಕೆಎಲ್‍ಇ ವಿಶ್ವವಿದ್ಯಾಲಯದ ಕುಲಪತಿ ಪ್ರಭಾಕರ ಬಸವಪ್ರಭು ಕೋರೆ ಅವರಿಗೆ ಬಸವಶ್ರೀ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಷಯ ಎಂದರು.

ಪ್ರಪಂಚದ ನಾನಾ ಭಾಗಗಳಲ್ಲಿ ಕೆಎಲ್‍ಇ ವಿವಿಯವರು ಪ್ರಖ್ಯಾತರಾಗಿ ಬಾಚಿಕೊಂಡಿರುವುದು ಹೆಮ್ಮೆಯ ಸಂಗತಿ.

ಪರಿಶ್ರಮ ಪೂರ್ವಕ ಸಾಧನೆ ಮತ್ತು ನಿರಂತರ ಕೃಷಿಯಿಂದ ದೈವದತ್ತವಾಗಿ ಬಂದ ಪ್ರತಿಭೆಯನ್ನು ಬಹುಮುಖವಾಗಿ ಬೆಳೆಸಿಕೊಂಡು ಬಹು ಆಯಾಮಗಳಲ್ಲಿ ಸಾಧಿಸಿರುವ ಮತ್ತೊಬ್ಬ ಸಾಧಕಿ ಸಂಗೀತ ವಿದುಷಿ ಸರ್ವಮಂಗಳ ಶಂಕರ್ ಅವರಿಗೆ ವಚನ ಸಾಹಿತ್ಯಶ್ರೀ ಪ್ರಶಸ್ತಿ ದೊರೆತಿರುವುದು ಸಂತೋಷದ ಸಂಗತಿ ಎಂದರು.
ವಚನ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕøತ ಹಿ.ಚಿ.ಶಾಂತವೀರಯ್ಯ ಇವರು ಒಬ್ಬ ಶ್ರೇಷ್ಠ ಲೇಖಕರಾಗಿ, ಸಂಶೋಧಕರಾಗಿ 5 ದಶಕಗಳಿಂದ ವಚನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರು ವಚನ ಸಾಹಿತ್ಯದ ಉಜ್ವಲತೆಯನ್ನು 21ನೇ ಶತಮಾನದಲ್ಲಿ ಬೆಳಗಿಸಿ ಬಹುದೊಡ್ಡ ಸಾಹಿತ್ಯ ಪರಂಪರೆಯನ್ನು ಕಾಲಮಾನರ ಆಚೆಗೆ ವಿಸ್ತರಿಸುವ ಅಪೂರ್ವ ಸಾಧಕರಾಗಿದ್ದಾರೆ ಎಂದು ಶ್ಲಾಘಿಸಿದರು.

ಪ್ರಶಸ್ತಿ ಪುರಸ್ಕøತ ಶಾಂತವೀರಯ್ಯ ಮಾತನಾಡಿ, ಬಸವಣ್ಣನ ಸಂಸ್ಕøತಿ ಅಳವಡಿಸಿಕೊಂಡಾಗ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಪುಣ್ಯಕೋಟಿಯಂಥ ಸಾಹಿತ್ಯ ರಚನೆಗಳು ಬೇರೆ ಯಾವ ಭಾಷೆಯಲ್ಲಿಯೂ ಇಲ್ಲ. ಇಂತಹ ಸಾಹಿತ್ಯ ವಚನಗಳನ್ನು ಕನ್ನಡದಲ್ಲಿ ಮಾತ್ರ ನೋಡಬಹುದಾಗಿದೆ ಎಂದರು.

ತಲೆ ಒಂದು ಉತ್ತಮ ಅಂಗ. ಅದನ್ನು ಸರಿಯಾಗಿ ಬಳಸಿಕೊಂಡರೆ ಸಮಾಜದ ಸತ್ಪ್ರಜೆಯಾಗಿ ಕೊಡುಗೆ ನೀಡಲು ಸಾಧ್ಯ ಎಂದರು.

ಬಸವ ವೇದಿಕೆ ಅಧ್ಯಕ್ಷ ಸಿ.ಸೋಮಶೇಖರ್, ಶ್ರೀರಂಗಪಟ್ಟಣದ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಬೆಂಗಳೂರು ಬೇಲಿ ಮಠದ ಶಿವಾನುಭವ ಪರಮೂರ್ತಿ ಶಿವರುದ್ರ ಸ್ವಾಮೀಜಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ