ಕ್ಯಾಲಿಫೆÇೀರ್ನಿಯಾ, ಏ.17-ಪ್ರವಾಸದ ವೇಳೆ ಅಮೆರಿಕದ ಒರೆಗಾನ್ ಪ್ರಾಂತ್ಯದಿಂದ ನಾಪತ್ತೆಯಾಗಿದ್ದ ಭಾರತೀಯ ಕುಟುಂಬದ ಇಬ್ಬರ ಮೃತದೇಹಗಳು ಈಲ್ ನದಿಯಲ್ಲಿ ಪತ್ತೆಯಾಗಿದೆ. ಕಣ್ಮರೆಯಾಗಿದ್ದ ಸಂದೀಪ್ ತೊಟ್ಟಪಿಳೈ, ಪತ್ನಿ ಸೌಮ್ಯ ಮತ್ತು ಇಬ್ಬರು ಮಕ್ಕಳಿಗಾಗಿ ಕಳೆದ ಒಂದು ವಾರದಿಂದ ತೀವ್ರ ಶೋಧ ಮುಂದುವರಿದಿತ್ತು.
ಸ್ಯಾನ್ಜೋಸ್ನಲ್ಲಿರುವ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಇವರೆಲ್ಲರೂ ನಾಪತ್ತೆಯಾಗಿದ್ದರು. ನದಿಯಲ್ಲಿ ಕಾರೊಂದು ಕೊಚ್ಚಿ ಹೋಗುತ್ತಿದ್ದದ್ದನ್ನು ನೋಡಿ ಮೆಂಡೊಸಿನೋ ಕಂಟ್ರಿ ಪ್ರದೇಶದ ಪೆÇಲೀಸರಿಗೆ ತಿಳಿಸಿದ್ದರು.
ಸಂದೀಪ್ ಬಂದು-ಮಿತ್ರರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಕಾರಿನ ಚಿತ್ರ ಹಾಗೂ ನದಿಯಲ್ಲಿ ಮುಳುಗುತ್ತಿದ್ದ ವಾಹನ ಚಿತ್ರ ಒಂದೇ ಆಗಿತ್ತು. ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಪೆÇಲೀಸರಿಗೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.