ಬೆಂಗಳೂರು,ಏ.17- ಅರಣ್ಯ ನಿವಾಸಿಗಳಿಗೆ ಗಿಡ ಬೆಳೆಸುವ ಮತ್ತು ಸಂರಕ್ಷಣೆ ಮಾಡುವ ಉದ್ಯೋಗಾವಕಾಶ ಕಲ್ಪಿಸಲಾಗುವ ಯೋಜನೆಗೆ 2018ರ ಅರಣ್ಯ ನೀತಿ ಅಡಿ ಆದ್ಯತೆ ನೀಡಬೇಕೆಂದು ಕರ್ನಾಟಕ ಗ್ರಾಮಾಭ್ಯೂದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹೆಚ್.ಬಿ.ಕಾಮಕೃಷ್ಣೇಗೌಡ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯವು 2018ರ ಕರಡು ಅರಣ್ಯ ನೀತಿಯನ್ನು ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿತ್ತು. ಈ ಹಿನ್ನೆಲೆಯಲ್ಲಿ ಕರಡು ನೀತಿಗೆ ಸೇರಿಸಬೇಕಾದ ಮತ್ತು ತಿದ್ದುಪಡಿ ಮಾಡಬೇಕಾದ ಕೆಲವೊಂದು ಆಂಶಗಳನ್ನು ತಿಳಿಸಿದ್ದಾರೆ.
ಶೇ. 40ರಷ್ಟು ಅರಣ್ಯ ಪ್ರದೇಶ ಅವಸಾನದ ಅಂಚಿನಲ್ಲಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಗಿಡ ಮರಗಳು ಬೆಳೆಸಿ ಸಂರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಸ್ಥಳೀಯ ಗ್ರಾಮಸಭೆಗಳ ಸುಪರ್ದಿಯಲ್ಲಿ ಅಭಿವೃದ್ಧಿ ಪಡಿಸುವ ಜವಾಬ್ದಾರಿಗೆ ಮಹತ್ವ ನೀಡಬೇಕು. 2006ರ ಅರಣ್ಯ ಕಾಯಿದೆಯನ್ನು ತಿದ್ದುಪಡಿ ಮಾಡಬೇಕು, ಅರಣ್ಯದ ಅಭಿವೃದ್ಧಿಯಲ್ಲಿ ಕೆಲಸಗಳನ್ನು ಖಾಸಗಿ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡದೆ ವಾಸ್ತವದಲ್ಲಿರುವ ಅರಣ್ಯ ಇಲಾಖೆಗೆ ಎಲ್ಲ ಹೊಣೆಗಾರಿಕೆ ನೀಡಬೇಕು ಎಂದರು.
ಮುಖ್ಯವಾಗಿ ಕಾಡಿನಲ್ಲಿರುವ ಮಾನವ ಸಂಪನ್ಮೂಲ ಪ್ರಾಣಿ ಸಂಪನ್ಮೂಲ, ಜೀವ ವೈವಿಧ್ಯತೆ ಸಂಪನ್ಮೂಲ ಅರಣ್ಯದಲ್ಲೇ ಉಳಿಸಿಕೊಳ್ಳುವ ಪಾಲನೆ ಮಾಡಬೇಕು. ಯಾವುದೇ ರೀತಿಯ ಕಾಡಿನಲ್ಲಿರುವ ಸ್ವಾಭಾವಿಕ ಸಂಪನ್ಮೂಲಕ್ಕೆ ಧಕ್ಕೆಯಾಗುವಂಥ ನಾಡಿನ ಸಂಪನ್ಮೂಲ ಕಾಡನ್ನು ಪ್ರದೇಶ ಮಾಡಬಾರದು. ಜೊತೆಗೆ ಕಮಿನಿಟಿ ಫಾರೆಸ್ಟ್ ಮ್ಯಾನೇಜ್ಮೆಂಟ್ ಜಾರಿಗೆ ತರಬೇಕು. ಈ ಕೆಲವೊಂದು ಒತ್ತಾಯಗಳನ್ನು 2018ರ ಕರಡು ಅರಣ್ಯ ನೀತಿಯಲ್ಲಿ ಅಳವಡಿಸಬೇಕೆಂದು ಅವರು ಒತ್ತಾಯಿಸಿದರು.