ಎಚ್.ಡಿ.ಕುಮಾರಸ್ವಾಮಿಯವರಂತೆ ತಾವು ಕೆಳಮಟ್ಟಕ್ಕೆ ಇಳಿದು ಸವಾಲು ಹಾಕುವುದಿಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಏ.17-ಎಚ್.ಡಿ.ಕುಮಾರಸ್ವಾಮಿಯವರಂತೆ ತಾವು ಕೆಳಮಟ್ಟಕ್ಕೆ ಇಳಿದು ಸವಾಲು ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಕುರಿತಂತೆ ಹಾಕಿರುವ ಸವಾಲಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಸೋತಿದ್ದಾರೆ. ಅವರ ಪತ್ನಿ ಸಹ ಚನ್ನಪಟ್ಟಣದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ನಾನೂ ಅವರ ಹಾಗೆ ತಳಮಟ್ಟಕ್ಕೆ ಇಳಿದು ಸವಾಲು ಹಾಕುವುದಿಲ್ಲ ಎಂದರು. ಕೆಪಿಸಿಸಿ ಉಪಾಧ್ಯಕ್ಷ ಸುದರ್ಶನ್ ಪಕ್ಷ ಬಿಡುವುದಿಲ್ಲ. ಅವರು ನಮ್ಮಲ್ಲಿಯೇ ಇರುತ್ತಾರೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ನಂತರ ತಮ್ಮ ಮಗ ಯತೀಂದ್ರ ಸ್ಪರ್ಧಿಸುತ್ತಿರುವ ವರುಣಾ ಕ್ಷೇತ್ರಕ್ಕೆ ಮತಪ್ರಚಾರಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ