ಲಕ್ನೋ, ಏ.17-ಕತುವಾ, ಉನ್ನಾವೊ ಮತ್ತು ಸೂರತ್ ಅತ್ಯಾಚಾರ ಘಟನೆ ಬಗ್ಗೆ ದೇಶಾದ್ಯಂತ ವ್ಯಾಪಕ ಆಕ್ರೋಶಗಳು ಭುಗಿಲೆದ್ದಿರುವಾಗಲೆ ಮತ್ತೊಂದು ಭೀಕರ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ. ವಿವಾಹ ಸಮಾರಂಭ ನಡೆಯುತ್ತಿದ್ದ ವೇಳೆ 7 ವರ್ಷದ ಬಾಲಕಿ ಮೇಲೆ 19 ವರ್ಷದ ಯುವಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಕ್ರೂರ ಘಟನೆ ಉತ್ತರ ಪ್ರದೇಶದ ಎತಾದಲ್ಲಿನ ಗಲ್ಲಾ ಮಂಡಿಯಿಂದ ವರದಿಯಾಗಿದೆ. ಮನೆಯವರೆಲ್ಲರೂ ಮದುವೆ ಸಡಗರ-ಸಂಭ್ರಮದಲ್ಲಿದ್ದಾಗ, ಸೋನು ಎಂಬ ಆರೋಪಿಯು ಬಾಲಕಿಯನ್ನು ಪುಸಲಾಯಿಸಿ ಹತ್ತಿರದ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಕರೆದೊಯ್ಡು ಆತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಪೆÇಲೀಸರು ಬಂಧಿಸಿದ್ದಾರೆ.