ಮೈಸೂರು, ಏ.16-ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂವರು ಹೊಸಬರು ಸ್ಪರ್ಧೆ ಎದುರಿಸುತ್ತಿದ್ದಾರೆ.
ಕಾಂಗ್ರೆಸ್ ಮೂವರು ಹೊಸಬರಿಗೆ ಮಣೆ ಹಾಕಿದ್ದು, ಕೆ.ಆರ್.ನಗರ ಕ್ಷೇತ್ರದಿಂದ ಡಿ.ರವಿಶಂಕರ್, ವರುಣಾದಿಂದ ಡಾ.ಯತೀಂದ್ರ, ಎಚ್.ಡಿ.ಕೋಟೆಯಿಂದ ಅನಿಲ್ ಚಿಕ್ಕಮಾದು ಸ್ಪರ್ಧಿಸಲು ಟಿಕೆಟ್ ನೀಡಿದೆ.
ಜೆಡಿಎಸ್ನ ಚಿಕ್ಕಮಾದು ದಿವಂಗತರಾದ ನಂತರ ಅವರ ಮಗ ಅನಿಲ್ ಚಿಕ್ಕಮಾದುಗೆ ಜೆಡಿಎಸ್ನಲ್ಲಿ ಉತ್ತಮ ಸ್ಪಂದನೆ ಸಿಗದೆ ಕಾಂಗ್ರೆಸ್ ಸೇರಿದ್ದರು.
ಇದೀಗ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡುವ ಮೂಲಕ ಎಚ್.ಡಿ.ಕೋಟೆಯ ಹುರಿಯಾಳನ್ನಾಗಿ ಮಾಡಿದೆ.
ಕೆ.ಆರ್.ನಗರದಲ್ಲಿ ಡಿ.ರವಿಶಂಕರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಮೊದಲ ಬಾರಿ ಸ್ಪರ್ಧೆಗಿಳಿಯುತ್ತಿರುವ ರವಿಶಂಕರ್ ಈಗಾಗಲೇ ಎರಡು ಬಾರಿ ಜೆಡಿಎಸ್ನಿಂದ ಗೆಲುವು ಸಾಧಿಸಿರುವ ಸಾ.ರಾ.ಮಹೇಶ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಈ ಬಾರಿ ಜೆಡಿಎಸ್ನ ಸಾ.ರಾ.ಮಹೇಶ್ ಹ್ಯಾಟ್ರಿಕ್ ಸಾಧಿಸುವರೋ, ಅಥವಾ ರವೀಂದ್ರ ತಮ್ಮ ಖಾತೆ ತೆರೆಯುವರೋ ಎಂಬುದನ್ನು ಮತದಾರರು ನಿರ್ಧರಿಸಲಿದ್ದಾರೆ.
ಅದೇ ರೀತಿ ವರುಣಾ ಕ್ಷೇತ್ರದಲ್ಲಿ ಡಾ.ಯತೀಂದ್ರ ಸಹ ಸ್ಪರ್ಧಿಸುತ್ತಿದ್ದು, ಮೂವರು ಹೊಸಬರು ಮೈಸೂರಿನಲ್ಲಿ ಸ್ಪರ್ಧಾರ್ಥಿಗಳಾಗಿದ್ದಾರೆ.