ಕಾಂಗ್ರೆಸ್ ಮೊದಲನೇ ಪಟ್ಟಿಯ ಜಿದ್ದಾ ಜಿದ್ದಿ ಕಥೆ

ಬೆಂಗಳೂರು, ಏ.16- ಕಳೆದ ಒಂದು ವಾರದಿಂದ ನಡೆದ ಸರ್ಕಸ್ ಕೊನೆಗೂ ಪೂರ್ಣಗೊಂಡಿದ್ದು ಕಾಂಗ್ರೆಸ್ ಅಳೆದು ತೂಗಿ ಮೊದಲ ಹಂತದಲ್ಲಿ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸಿಂಧಗಿ, ನಾಗಠಾಣ, ಮೇಲುಕೋಟೆ, ಕಿತ್ತೂರು, ರಾಯಚೂರು, ಶಾಂತಿನಗರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸದೆ ಕಾಂಗ್ರೆಸ್ ಬಾಕಿ ಉಳಿಸಿದೆ. 15 ಮಹಿಳೆಯರಿಗೆ, 11 ಮುಸ್ಲಿಂರಿಗೆ, ಇಬ್ಬರು ಕ್ರಿಶ್ಚಿಯನರಿಗೆ, ಇಬ್ಬರು ಜೈನರಿಗೆ ಟಿಕೆಟ್ ನೀಡಲಾಗಿದೆ.

ವಿಧಾನ ಪರಿಷತ್ ಸದಸ್ಯರಾದ ಡಾ.ಜಿ.ಪರಮೇಶ್ವರ್, ಎಸ್.ಆರ್.ಪಾಟೀಲ್, ಶ್ರೀನಿವಾಸ ಮಾನೆ, ಎಂ.ಆರ್.ಸೀರಾಂ, ಎಚ್.ಎಂ.ರೇವಣ್ಣ, ಬೈರತಿ ಸುರೇಶ್ ಅವರು ಟಿಕೆಟ್ ಗಿಟ್ಟಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನಿರಕರಿಸಲಾಗಿದೆ. ಆದರೆ ಅವರ ಪುತ್ರ ಯತೀಂದ್ರ ಅವರಿಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಸಿದ್ದರಾಮಯ್ಯ ಅವರ ಆಪ್ತ ಮಹದೇವಪ್ಪ ಅವರಿಗೆ ಟಿಕೆಟ್ ನೀಡದೆ ಕೈ ಬಿಡಲಾಗಿದೆ. ಬದಲಾಗಿ ಸಚಿವರಾದ ಜಯಚಂದ್ರ ಪುತ್ರ ಸಂತೋಷ್, ರಾಮಲಿಂಗಾ ರೆಡ್ಡಿ ಸೌಮ್ಯ, ಎಂ.ಕೃಷ್ಣಪ್ಪ ಅವರ ಪುತ್ರ ಹಾಲಿ ಶಾಸಕ ಪ್ರಿಯಾ ಕೃಷ್ಣ, ಸಂಸದರಾದ ಕೆ.ಎಚ್.ಮುನಿಯಪ್ಪ ಅವರ ಪುತ್ರಿ, ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಮತ್ತೆ ಸ್ಪರ್ಧಿಸಲು ಅವಕಾಶ ಗಿಟ್ಟಿಸಿದ್ದಾರೆ.

ಬಿಜೆಪಿಯಿಂದ ವಲಸೆ ಬಂದ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿರುವ ಎಂ.ಡಿ.ಲಕ್ಷ್ಮೀನಾರಾಯಣ ಅವರಿಗೆ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ, ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಬಿಜೆಪಿಯಿಂದ ವಲಸೆ ಬಂದ ಎಂ.ವೈ.ಪಾಟೀಲ್‍ರಿಗೆ ಅಫ್ಜಲ್‍ಪುರ ಕ್ಷೇತ್ರದಿಂದ, ಕೆಜೆಪಿಯಿಂದ ಬಂದ ಬಿ.ಆರ್.ಪಾಟೀಲ್‍ರಿಗೆ ಅಳಂದ ಕ್ಷೇತ್ರದಿಂದ, ತೀವ್ರ ವಿವಾದಕ್ಕೀಡಾಗಿದ್ದರೂ ಉದ್ಯಮಿ ಅಶೋಕ್ ಖೇಣಿ ಅವರಿಗೆ ಬೀದರ್ ದಕ್ಷಿಣ ಕ್ಷೇತ್ರದಿಂದ, ವಿಜಯಪುರ ಕ್ಷೇತ್ರದಿಂದ ಆನಂದ್ ಸಿಂಗ್,
ಬಳ್ಳಾರಿ (ಎಸ್‍ಟಿ) ಕ್ಷೇತ್ರದಿಂದ ಬಿ.ನಾಗೇಂದ್ರ, ಪಕ್ಷೇತರರ ಶಾಸಕರಾಗಿದ್ದ ಮಂಕಾಳ ಸುಬ್ಬಾ ವೈದ್ಯ ಭಟ್ಕಳ ಕ್ಷೇತ್ರದಿಂದ, ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ ಆರ್.ಎಸ್.ರವಿಕುಮಾರ್ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ.

 

ಹಾಲಿ ಶಾಸಕ ಶಿವಮೂರ್ತಿ ಅವರಿಗೆ ಟಿಕೆಟ್ ನಿರಾಕರಿಸಿ ಮಾಯಕೊಂಡ ಕ್ಷೇತ್ರದಿಂದ ಕೆ.ಎಸ್.ಬಸವರಾಜಪ್ಪ ಅವರಿಗೆ ನೀಡಲಾಗಿದೆ. ಎನ್‍ಎಸ್‍ಯುಐನ ಮಂಜುನಾಥ್ ಗೌಡ, ಮೆಯರ್ ಸಂಪತ್ ರಾಜ್ ಅವರಿಗೆ ಸರ್ ಸಿ.ವಿ.ರಾಮನ್ ನಗರ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಜೆಡಿಎಸ್‍ನಿಂದ ಬಂದ ಗಂಗಾವತಿಯ ಇಕ್ಬಾಲ್ ಅನ್ಸಾರಿ, ಪುಲಕೇಶಿನಗರ (ಎಸ್ಸಿ) ಅಖಂಡ ಶ್ರೀನಿವಾಸ ಮೂರ್ತಿ, ಚಾಮರಾಜಪೇಟೆಯ ಝಮೀರ್ ಅಹಮದ್ ಖಾನ್, ಮಾಗಡಿಯ ಎಚ್.ಸಿ.ಬಾಲಕೃಷ್ಣ, ಶ್ರೀರಂಗಪಟ್ಟಣ ರಮೇಶ್ ಬಂಡಿಸಿದ್ದನೇಗೌಡ, ನಾಗಮಂಗಲ ಚೆಲುವರಾಯಸ್ವಾಮಿ ಸೇರಿ ಎಲ್ಲರಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ.

218 ಅಭ್ಯರ್ಥಿಗಳ ಪಟ್ಟಿ ಹೀಗಿದೆ

  ಕ್ಷೇತ್ರ ಅಭ್ಯರ್ಥಿಗಳು
1 ನಿಪ್ಪಾಣಿ ಕಾಕಾಸಾಹೇಬ್‍ಪಾಟೀಲ್
2 ಚಿಕ್ಕೋಡಿ-ಸದಲಗಾ ಗಣೇಶ್ ಹುಕ್ಕೇರಿ
3 ಅಥಣಿ ಮಹೇಶ್ ಈರಣ್ಣಗೌಡ ಕುಮಟಳ್ಳಿ
4 ಕಾಗವಾಡ್ ಶ್ರೀಮಂತ್ ಬಾಳಸಾಹೇಬ್ ಪಾಟೀಲ್
5 ಕುಡಚಿ (ಎಸ್‍ಸಿ) ಅಮಿತ್ ಶಾಮ್ ಘಾಟೆ
6 ರಾಯಬಾಗ್(ಎಸ್‍ಸಿ) ಪ್ರದೀಪ್ ಕುಮಾರ್ ಮಾಳಗಿ
7 ಹುಕ್ಕೇರಿ ಎ.ಬಿ.ಪಾಟೀಲ್
8 ಅರಬಾವಿ ಅರವಿಂದ್ ಮಹದೇವ್ ರಾವ್ ದಳವಾಯಿ
9 ಗೋಕಾಕ್ ರಮೇಶ್ ಜಾರಕಿಹೋಳಿ
10 ಯಮಕನಮರಡಿ (ಎಸ್‍ಟಿ) ಸತೀಶ್ ಜಾರಕಿಹೊಳಿ
11 ಬೆಳಗಾವಿ ಉತ್ತರ ಫಿರೋಜ್ ಸೇಠ್
12 ಬೆಳಗಾವಿ ದಕ್ಷಿಣ ಎಂ.ಡಿ.ಲಕ್ಷ್ಮೀನಾರಾಯಣ
13 ಬೆಳಗಾವಿ ಗ್ರಾ. ಲಕ್ಷ್ಮೀ ಹೆಬ್ಬಾಳ್ಕರ್
14 ಖಾನಪುರ ಅಂಜಲಿ ನಿಂಬಾಳ್ಕರ್
15 ಬೈಲಹೊಂಗಲ ಮಹಂತೇಶ್ ಕೌಜಲಗಿ
16 ಸವದತ್ತಿ ಯಲ್ಲಮ್ಮ ವಿಶ್ವಾಸ್ ವಸಂತ್ ವೈದ್ಯ
17 ರಾಮದುರ್ಗ ಪಿ.ಎಂ.ಅಶೋಕ್
18 ಮುದೋಳ್ (ಎಸ್‍ಸಿ) ಸತೀಶ್ ಚಿನ್ನಪ್ಪ ಬಂಡಿವಡ್ಡರ್
19 ತೆರದಾಳ್ ಉಮಾಶ್ರೀ
20 ಜಮಖಂಡಿ ಸಿದ್ದು ನ್ಯಾಮೇಗೌಡ
21 ಬಿಳಗಿ ಜಿ.ಟಿ.ಪಾಟೀಲ್
22 ಬಾದಾಮಿ ಡಾ.ದೇವರಾಜ್ ಪಾಟೀಲ್
23 ಬಾಗಲಕೋಟೆ ಎಚ್.ವೈ.ಮೇಟಿ
24 ಹುನಗುಂದ ವಿಜಯಾನಂದ ಕಾಶಪ್ಪನವರ್
25 ಮುದ್ದೇಬಿಹಾಳ ಅಪ್ಪಾಜ್ಜಿನಾಡಗೌಡ
26 ದೇವರ ಹಿಪ್ಪರಗಿ ಬಾಪುಗೌಡ ಪಾಟೀಲ್
27 ಬಸವನಬಾಗೇವಾಡಿ ಶಿವಾನಂದ ಪಾಟೀಲ್
28 ಬಬಲೇಶ್ವರ್ ಎಂ.ಬಿ.ಪಾಟೀಲ್
29 ಬಿಜಾಪುರ ನಗರ ಅಬ್ದುಲ್ ಹಮೀದ್ ಮುಶ್ರಫ್
30 ಇಂಡಿ ಯಶವಂತರಾಯಗೌಡ ಪಾಟೀಲ್
31 ಅಫ್ಜಲ್‍ಪುರ ಎಂ.ವೈ.ಪಾಟೀಲ್
32 ಜೇವರ್ಗಿ ಡಾ.ಅಜಯ್ ಸಿಂಗ್
33 ಶಹಪುರ್ (ಎಸ್‍ಟಿ) ರಾಜ್ ವೆಂಕಟಪ್ಪ ನಾಯಕ್
34 ಶಹಾಪುರ ಶರಣಬಸಪ್ಪ ದರ್ಶನಾಪುರ
35 ಯಾದಗಿರ್ ಡಾ.ಎ.ಬಿ.ಮಲಕರೆಡ್ಡಿ
36 ಗುರುಮಿಟ್ಕಲ್ ಬಾಬುರಾವ್ ಚಿಂಚಣಸೂರ್
37 ಚಿತ್ತಾಪುರ (ಎಸ್‍ಸಿ) ಪ್ರಿಯಾಂಕ್ ಖರ್ಗೆ
38 ಸೇಡಂ ಡಾ.ಶರಣ ಪ್ರಕಾಶ್ ಪಾಟೀಲ್
39 ಚಿಂಚೋಳಿ (ಎಸ್‍ಸಿ) ಡಾ.ಉಮೇಶ್ ಜಾದವ್
40 ಗುಲ್ಬರ್ಗ ಗ್ರಾ (ಎಸ್‍ಸಿ) ವಿಜಯಕುಮಾರ್
41 ಗುಲ್ಬರ್ಗ ದಕ್ಷಿಣ ಅಲ್ಲಮ ಪ್ರಭುಪಾಟೀಲ್
42 ಗುಲ್ಬರ್ಗ ಉತ್ತರ ಶ್ರೀಮ ಫಾತೀಮಾ ಖಮರುಲ್ಲಾ ಇಸ್ಲಾಂ
43 ಅಳಂದ ಬಿ.ಆರ್.ಪಾಟೀಲ್
44 ಬಸವಕಲ್ಯಾಣ ಡಾ.ನಾರಾಯಣ ರಾವ್
45 ಹುಮ್ನಾಬಾದ್ ರಾಜಶೇಖರ್ ಪಾಟೀಲ್
46 ಬೀದರ್ ದಕ್ಷಿಣ ಅಶೋಕ್ ಖೇಣಿ
47 ಬೀದರ್ ರಹೀಂ ಖಾನ್
48 ಬಾಲ್ಕಿ ಈಶ್ವರ್ ಖಂಡ್ರೆ
49 ಔರಾದ್ (ಎಸ್‍ಸಿ) ವಿಜಯಕುಮಾರ್
50 ರಾಯಚೂರು ಗ್ರಾ(ಎಸ್‍ಟಿ) ಬಸವನಗೌಡ
51 ಮಾನ್ವಿ (ಎಸ್‍ಟಿ) ಜಿ.ಹಂಪಾನಾಯಕ್
52 ದೇವದುರ್ಗ (ಎಸ್‍ಟಿ) ರಾಜಶೇಖರ್ ನಾಯಕ್
53 ಲಿಂಗಸೂರು (ಎಸ್‍ಸಿ) ದುರ್ಗಪ್ಪ ಹೊಳಗೆರೆ
54 ಸಿಂಧನೂರು ಹಂಪನಗೌಡ ಬಾದರ್ಲಿ
55 ಮಸ್ಕಿ (ಎಸ್‍ಟಿ) ಪ್ರತಾಪ್ ಗೌಡ ಪಾಟೀಲ್
56 ಕುಷ್ಟಗಿ ಅಮರೇಗೌಡ ಪಾಟೀಲ್ ಬೈಯ್ಯಾಪುರ
57 ಕನಕನಗಿರಿ (ಎಸ್‍ಸಿ) ಶಿವರಾಜ ತಂಗಡಗಿ
58 ಗಂಗಾವತಿ ಇಕ್ಬಾಲ್ ಅನ್ಸಾರಿ
59 ಯಲಬುರ್ಗ ಬಸವರಾಜ ರಾಯರೆಡ್ಡಿ
60 ಕೊಪ್ಪಳ ರಾಘವೇಂದ್ರ ಹಿಟ್ನಾಳ್
61 ಶಿರಹಟ್ಟಿ (ಎಸ್ಸಿ) ದೊಡ್ಡಮನಿ ರಾಮಕೃಷ್ಣ
62 ಗದಗ ಎಚ್.ಕೆ.ಪಾಟೀಲ್
63 ರೋಣ ಜಿ.ಎಸ್.ಪಾಟೀಲ್
64 ನರಗುಂದ ಬಿ.ಆರ್.ಯಾವಗಲ್
65 ನವಲಗುಂದ ವಿನೋದ್ ಕೆ,ಅಸೋಟಿ
66 ಕುಂದಗಲ್ ಚೆನ್ನಬಸಪ್ಪ ಶಿವಳ್ಳಿ
67 ಧಾರವಾಡ ವಿನಯ್ ಕುಲಕರ್ಣಿ
68 ಹು-ಧಾ ಪೂರ್ವ (ಎಸ್ಸಿ) ಪ್ರಸಾದ್ ಅಬ್ಬಯ್ಯ
69 ಹು-ಧಾ ಕೇಂದ್ರ ಡಾ.ಮಹೇಶ್ ಸಿ.ನಲ್ವಾಡ್
70 ಹು-ಧಾ ಪಶ್ಚಿಮ ಮೊಹಮ್ಮದ್ ಇಸ್ಮಾಯಿಲ್
71 ಕಲಗಟಗಿ ಸಂತೋಷ್ ಲಾಡ್
72 ಹಳಿಯಾಳ ಆರ್.ವಿ.ದೇವರಾಜ್
73 ಕಾರಾವಾರ ಸತೀಶ್ ಶೈಲ್
74 ಕುಮಟಾ ಶಾರದಾ ಮೋಹನ್ ಶೆಟ್ಟಿ
75 ಭಟ್ಕಳ ಮಂಕಾಳ ಸುಬ್ಬಾ ವೈದ್ಯ
76 ಶಿರಸಿ ಭೀಮಾನಾಯಕ್
77 ಯಲ್ಲಾಪುರ ಅರೆ ಬೈಲ್ ಹೆಬ್ಬಾರ್ ಶಿವರಾಮ್
78 ಹಾನಗಲ್ ಮಾನೆ ಶ್ರೀನಿವಾಸ
79 ಶಿಗ್ಗಾವ್ ಸೈಯದ್ ಅಝಂಫಿರ್ ಖಾದ್ರಿ
80 ಹಾವೇರಿ (ಎಸ್ಸಿ) ರುದ್ರಪ್ಪ ಮಾನಪ್ಪ ಲಮಾಣಿ
81 ಬ್ಯಾಡಗಿ ಎಸ್.ಆರ್.ಪಾಟೀಲ್
82 ಹಿರೆಕೇರೆರೂರು ಬಿ.ಸಿ.ಪಾಟೀಲ್
83 ರಾಣೆಬೆನ್ನೂರು ಕೆ.ಬಿ.ಕೋಳಿವಾಡ
84 ಹಡಗಲಿ (ಎಸ್ಸಿ) ಪರಮೇಶ್ವರ್ ನಾಯಕ್
85 ಹಗರಿಬೊಮ್ಮನಹಳ್ಳಿ(ಎಸ್ಸಿ) ಎಲ್.ಬಿ.ಪಿ.ಭೀಮಾನಾಯಕ್
86 ವಿಜಯಪುರ ಆನಂದ್ ಸಿಂಗ್
87 ಕಂಪ್ಲಿ (ಎಸ್‍ಟಿ) ಜೆ.ಎನ್.ಗಣೇಶ್
88 ಶಿರಗುಪ್ಪ (ಎಸ್‍ಟಿ) ಮುರಳಿ ಕೃಷ್ಣ
89 ಬಳ್ಳಾರಿ (ಎಸ್‍ಟಿ) ಬಿ.ನಾಗೇಂದ್ರ
90 ಬಳ್ಳಾರಿ ನಗರ ಅನಿಲ್ ಲಾಡ್
91 ಸಂಡೂರು (ಎಸ್‍ಟಿ) ತುಕರಾಮ್
92 ಕುಡ್ಲಗಿ (ಎಸ್‍ಟಿ) ರಾಘು ಗುಜ್ಜಾಲ್
93 ಮೊಳಕಾಲ್ಮೂರು(ಎಸ್ಟಿ) ಡಾ.ಬಿ.ಯೋಗೇಶ್ ಬಾಬು
94 ಚಳ್ಳಕೆರೆ ಟಿ.ರಘುಮೂರ್ತಿ
95 ಚಿತ್ರದುರ್ಗ ಡಾ.ಎಚ್.ಎ.ಶಣ್ಮುಖಪ್ಪ
96 ಹಿರಿಯೂರು ಡಾ.ಸುಧಾಕರ್
97 ಹೊಸದುರ್ಗ ಬಿ.ಜಿ.ಗೋವಿಂದಪ್ಪ
98 ಹೊಳಲ್ಕೆರೆ (ಎಸ್‍ಸಿ) ಎಚ್.ಆಂಜನೇಯ
99 ಜಗಳೂರು (ಎಸ್‍ಟಿ) ಶ್ರೀಮತಿ ಎ.ಎಲ್.ಪುಷ್ಪಾ
100 ಹರಪನಹಳ್ಳಿ ಎಂ.ಪಿ.ರವೀಂದ್ರ
101 ಹರಿಹರ ಎಸ್.ರಾಮಪ್ಪ
102 ದಾವಣಗೆರೆ ಉತ್ತರ ಎಸ್.ಎಸ್.ಮಲ್ಲಿಕಾರ್ಜುನ್
103 ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ
104 ಮಾಯಕೊಂಡ (ಎಸ್‍ಸಿ) ಕೆ.ಎಸ್.ಬಸವರಾಜಪ್ಪ
105 ಚೆನ್ನಗಿರಿ ವಡ್ನಾಳ್ ರಾಜಣ್ಣ
106 ಹೊನ್ನಾಳಿ ಡಾ.ಜಿ.ಶಾಂತನಗೌಡ
107 ಶಿವಮೊಗ್ಗ ಗ್ರಾ (ಎಸ್‍ಸಿ) ಡಾ.ಎಸ್.ಕೆ.ಶ್ರೀನಿವಾಸ ಕರಿಯಣ್ಣ
108 ಭದ್ರಾವತಿ ಬಿ.ಕೆ.ಸಂಗಮೇಶ್ವರ
109 ಶಿವಮೊಗ್ಗ ಕೆ.ಬಿ.ಪ್ರಸನ್ನಕುಮಾರ್
110 ತೀರ್ಥಹಳ್ಳಿ ಕಿಮ್ಮನ್ನೆ ರತ್ನಾಕರ್
111 ಶಿಕಾರಿಪುರ ಜಿ.ಬಿ.ಮಾಲತೇಶ್
112 ಸೊರಬ ರಾಜು ಎಂ. ಥಲ್ಲೂರು
113 ಸಾಗರ ಕಾಗೋಡು ತಿಮ್ಮಪ್ಪ
114 ಬೈಂದೂರು ಕೆ.ಗೋಪಾಲ್ ಪೂಜಾರಿ
115 ಕುಂದಾಪುರ ರಾಕೇಶ್ ಮಲ್ಲಿ
116 ಉಡುಪಿ ಪ್ರಮೋದ್ ಮದ್ವರಾಜ್
117 ಕಾಪು ವಿನಯ್ ಕುಮಾರ್ ಸೋರಕೆ
118 ಕಾರ್ಕಳ ಎಚ್.ಗೋಪಾಲ್ ಬಂಡಾರಿ
119 ಶೃಂಗೇರಿ ಟಿ.ಡಿ.ರಾಜೇಗೌಡ
120 ಮೂಡಿಗೆರೆ (ಎಸ್ಸಿ) ಶ್ರೀಮತಿ ಮೋಟಮ್ಮ
121 ಚಿಕ್ಕಮಗಳೂರು ಡಾ.ಬಿ.ಎಲ್.ಶಂಕರ್
122 ತರಿಕೆರೆ ಎಸ್.ಎಂ.ನಾಗರಾಜು
123 ಕಡೂರು ಕೆ.ಎಸ್.ಆನಂದ
124 ಚಿಕ್ಕನಾಯಕನಹಳ್ಳಿ ಸಂತೋಷ್ ಜಯಚಂದ್ರ
125 ತಿಪಟೂರು ಬಿ.ನಂಜಾಮರಿ
126 ತುರುವೇಕೆರೆ ಚೌದ್ರಿ ರಂಗಪ್ಪ
127 ಕುಣಿಗಲ್ ಡಾ.ಎಚ್.ಡಿ.ರಂಗನಾಥ್
128 ತುಮಕೂರು ನಗರ ಡಾ.ರಫೀಕ್ ಅಹಮದ್
129 ತುಮಕೂರು ಗ್ರಾ. ಆರ್.ಎಸ್.ರವಿಕುಮಾರ್
130 ಕೊರಟಗೆರೆ ಡಾ.ಜಿ.ಪರಮೇಶ್ವರ್
131 ಗುಬ್ಬಿ ಕುಮಾರ್ ಕೆ
132 ಶಿರಾ ಟಿ.ಬಿ.ಜಯಚಂದ್ರ
133 ಪಾವಗಡ ವೆಂಕಟರವಣಪ್ಪ
134 ಮಧುಗಿರಿ ಕೆ.ಎನ್.ರಾಜಣ್ಣ
135 ಗೌರಿಬಿದನೂರು ಎನ್.ಎಚ್.ಶಿವಶಂಕರ ರೆಡ್ಡಿ
136 ಬಾಗೇಪಲ್ಲಿ ಎಸ್.ಎನ್.ಸುಬ್ಬಾರೆಡ್ಡಿ
137 ಚಿಕ್ಕಬಳ್ಳಾಪುರು ಡಾ.ಸುಧಾಕರ್
138 ಶಿಡ್ಲಗಟ್ಟ ವಿ.ಮುನಿಯಪ್ಪ
139 ಚಿಂತಾಮಣಿ ಶ್ರೀಮತಿ ವಾಣಿ ಕೃಷ್ಣರೆಡ್ಡಿ
140 ಶ್ರೀನಿವಾಸಪುರ ರಮೇಶ್ ಕುಮಾರ್
141 ಮುಳಬಾಗಿಲು (ಎಸ್ಸಿ) ಜಿ.ಮಂಜುನಾಥ್
142 ಕೆ.ಜಿ.ಎಫ್ (ಎಸ್ಸಿ) ರೂಪಾ
143 ಬಂಗಾರಪೇಟೆ(ಎಸ್ಸಿ) ನಾರಾಯಣಸ್ವಾಮಿ
144 ಕೋಲಾರ ಸೈಯದ್ ಝಮೀರ್ ಪಾಶಾ
145 ಮಾಲೂರು ಕೆ.ವೈ.ನಂಜೇಗೌಡ
146 ಯಲಹಂಕ ಎಂ.ಎನ್.ಗೋಪಾಲಕೃಷ್ಣ
147 ಕೆ.ಆರ್.ಪುರಂ ಬಿ.ಎ.ಬಸವರಾಜ್
148 ಬ್ಯಾಟರಾಯನಪುರ ಕೃಷ್ಣಬೈರೇಗೌಡ
149 ಯಶವಂತಪುರ ಎಸ್.ಟಿ.ಸೋಮಶೇಖರ್
150 ರಾಜರಾಜೇಶ್ವರಿ ನಗರ ಮುನಿರತ್ನ
151 ದಾಸರಹಳ್ಳಿ ಪಿ.ಎನ್.ಕೃಷ್ಣಮೂರ್ತಿ
152 ಮಹಾಲಕ್ಷ್ಮೀ ಲೇಔಟ್ ಎಚ್.ಎಸ್.ಮಂಜುನಾಥ್
153 ಮಲ್ಲೇಶ್ವರಂ ಎಂ.ಆರ್.ಸೀತಾರಾಂ
154 ಹೆಬ್ಬಾಳ ಬಿ.ಎಸ್.ಸುರೇಶ್
155 ಪುಲಕೇಶಿನಗರ (ಎಸ್ಸಿ) ಅಖಂಡ ಶ್ರೀನಿವಾಸ ಮೂರ್ತಿ
156 ಸರ್ವಜ್ಞ ನಗರ ಕೆ.ಜೆ.ಜಾರ್ಜ್
157 ಸಿ.ವಿ.ರಾಮನ್‍ನಗರ್ (ಎಸ್ಸಿ) ಸಂಪತ್ ರಾಜ್
158 ಶಿವಾಜಿನಗರ ರೋಷನ್ ಬೇಗ್
159 ಗಾಂಧಿನಗರ ದಿನೇಶ್ ಗುಂಡುರಾವ್
160 ರಾಜಾಜಿನಗರ ಶ್ರೀಮತಿ ಪದ್ಮಾವತಿ
161 ಗೋವಿಂದರಾಜನಗರ ಪ್ರಿಯಾಕೃಷ್ಣ
162 ವಿಜಯನಗರ ಎಂ.ಕೃಷ್ಣಪ್ಪ
163 ಚಾಮರಾಜಪೇಟೆ ಝಮೀರ್ ಅಹಮದ್ ಖಾನ್
164 ಚಿಕ್ಕಪೇಟೆ ಆರ್.ವಿ.ದೇವರಾಜ್
165 ಬಸವನಗುಡಿ ಎಂ.ಬೋರೆಗೌಡ
166 ಪದ್ಮನಾಭನಗರ ಬಿ.ಗುರ್ರಪ್ಪನಾಯ್ಡು
167 ಬಿ.ಟಿ.ಎಂ.ಲೇಔಟ್ ರಾಮಲಿಂಗಾರೆಡ್ಡಿ
168 ಜಯನಗರ ಸೌಮ್ಯರೆಡ್ಡಿ
169 ಮಹದೇವಪುರ ಎ.ಸಿ.ಶ್ರೀನಿವಾಸ್
170 ಬೊಮ್ಮನಹಳ್ಳಿ ಸುಷ್ಮಾರಾಜಗೋಪಾಲ ರೆಡ್ಡಿ
171 ಬೆಂಗಳೂರು ದಕ್ಷಿಣ ಆರ್.ಕೆ.ರಮೇಶ್
172 ಆನೇಕಲ್ (ಎಸ್ಸಿ) ಬಿ.ಶಿವಣ್ಣ
173 ಹೊಸಕೋಟೆ ಎಂಟಿಬಿ ನಾಗರಾಜ್
174 ದೇವನಹಳ್ಳಿ (ಎಸ್ಸಿ) ವೆಂಕಟಸ್ವಾಮಿ
175 ದೊಡ್ಡಬಳ್ಳಾಪುರ ಟಿ.ವೆಂಕಟರಮಣಯ್ಯ
176 ನೆಲಮಂಗಲ(ಎಸ್ಸಿ) ಆರ್.ನಾರಾಯಣಸ್ವಾಮಿ
177 ಮಾಗಡಿ ಎಚ್.ಸಿ.ಬಾಲಕೃಷ್ಣ
178 ರಾಮನಗರ ಎಚ್.ಎ.ಇಕ್ಬಾಲ್ ಹುಸೈನ್
179 ಕನಕಪುರ ಡಿ.ಕೆ.ಶಿವಕುಮಾರ್
180 ಚನ್ನಪಟ್ಟಣ್ಣ ಎಚ್.ಎಂ.ರೇವಣ್ಣ
181 ಮಳ್ಳವಳ್ಳಿ (ಎಸ್ಸಿ) ಪಿ.ಎಂ.ನರೇಂದ್ರಸ್ವಾಮಿ
182 ಮದ್ದೂರು ಜಿ.ಎಂ.ಮಧು
183 ಮಂಡ್ಯ ಅಂಬರೀಶ್
184 ಶ್ರೀರಂಗಪಟ್ಟಣ ರಮೇಶ್ ಬಂಡಿಸಿದ್ದನೇಗೌಡ
185 ನಾಗಮಂಗಲ ಚೆಲುವರಾಯಸ್ವಾಮಿ
186 ಕೃಷ್ಣರಾಜಪೇಟೆ ಕೆ.ಬಿ.ಚಂದ್ರಶೇಖರ್
187 ಶ್ರವಣಬೆಳಗೋಳ ಸಿ.ಎಸ್.ಪುಟ್ಟೇಗೌಡ
188 ಅರಸೀಕೆರೆ ಜಿ.ಬಿ.ಶಶಿಧರ್
189 ಬೇಲೂರು ಶ್ರೀಮತಿ ಕೀರ್ತನಾ ರುದ್ರೇಗೌಡ
190 ಹಾಸನ ಮಹೇಶ್ ಎಚ್.ಕೆ.
191 ಹೊಳೆನರಸೀಪುರ ಮಂಜೇಗೌಡ
192 ಅರಕಲಗೋಡು ಎ.ಮಂಜು
193 ಸಕಲೇಶಪುರ(ಎಸ್‍ಸಿ) ಸಿದ್ದಯ್ಯ
194 ಬೆಳ್ತಂಗಡಿ ಕೆ.ವಸಂತಬಂಗೇರಾ
195 ಮೂಡಬಿದರೆ ಕೆ.ಅಭಯಚಂದ್ರ ಜೈನ್
196 ಮಂಗಳೂರು ಉತ್ತರ ಬಿ.ಎ.ಮೊಯಿದ್ದಿನ್ ಬಾವ
197 ಮಂಗಳೂರು ದಕ್ಷಿಣ ಜೆ.ಆರ್.ಲೋಬೋ
198 ಮಂಗಳೂರು ಯು.ಟಿ.ಖಾದರ್
199 ಬಂಡ್ವಾಳ ರಮಾನಾಥ್ ರೈ
200 ಪುತ್ತೂರು ಶ್ರೀಮತಿ ಶಕುಂತಾಲಾ ಶೆಟ್ಟಿ
201 ಸುಳ್ಯ (ಎಸ್‍ಸಿ) ಡಾ.ಬಿ.ರಾಘು
202 ಮಡಕೇರಿ ಎಚ್.ಎಸ್.ಚಂದ್ರಾ ಮೂಲಿ
203 ವಿರಾಜಪೇಟೆ ಸಿ.ಎಸ್.ಅರುಣ್ ಮಾಚಯ್ಯ
204 ಪಿರಿಯಾಪಟ್ಟಣ ಕೆ.ವೆಂಕಟೇಶ್
205 ಕೃಷ್ಣರಾಜನಗರ ಡಾ.ರವಿಶಂಕರ್
206 ಹುಣಸೂರು ಎಚ್.ಪಿ.ಮಂಜುನಾಥ್
207 ಹೆಗ್ಗಡದೇವನಕೋಟೆ (ಎಸ್ಟಿ) ಅನಿಲ್ ಕುಮಾರ್ ಸಿ
208 ನಂಜನಗೂಡು (ಎಸ್ಸಿ) ಕಹಳೆ ಕೃಷ್ಣಮೂರ್ತಿ
209 ಚಾಮುಂಡೇಶ್ವರಿ ಸಿದ್ದರಾಮಯ್ಯ
210 ಕೃಷ್ಣರಾಜ ಎಂ.ಕೆ.ಸೋಮಶೇಖರ್
211 ಚಾಮರಾಜ ವಾಸು
212 ನರಸಿಂಹರಾಜ ತನ್ನಿರ್ ಸೆಠ್
213 ವರುಣ ಡಾ.ಯತೀಂದ್ರ
214 ಟಿ.ನರಸೀಪುರ(ಎಸ್ಸಿ) ಎಚ್.ಸಿ.ಮಹದೇವಪ್ಪ
215 ಹನ್ನೂರು ಆರ್.ನರೇಂದ್ರ
216 ಕೊಳ್ಳೆಗಾಲ (ಎಸ್ಸಿ) ಎ.ಆರ್.ಕೃಷ್ಣಮೂರ್ತಿ
217 ಚಾಮರಾಜನಗರ ಪಾಂಡುರಂಗ ಶೆಟ್ಟಿ
218 ಗುಂಡ್ಲುಪೇಟೆ ಗೀತಾ ಮಹದೇವ ಪ್ರಸಾದ್

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ