ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಐಪಿಎಲ್ ಟಿ20 ಪಂದ್ಯ:

ಮುಂಬೈ, ಏ.16-ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ಮತ್ತು ಮೂರು ಪಂದ್ಯಗಳಲ್ಲಿ ಒಂದೇ ಒಂದು ಗೆಲುವಿನ ವಿಚಲಿತವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಾಳೆ ಮುಂಬೈನಲ್ಲಿ ನಡೆಯುವ ಐಪಿಎಲ್ ಟಿ20 ಪಂದ್ಯ ಮಹತ್ವದ್ದೆನಿಸಿದೆ.
ರೋಹಿತ್‍ಶರ್ಮಾ ನೇತೃತ್ವ ಮುಂಬೈ ಮತ್ತು ಸ್ಫೋಟಕ ಬ್ಯಾಟ್ಸ್‍ಮನ್ ವಿರಾಟ್ ಕೊಹ್ಲಿ ನಾಯಕತ್ವದ ಬೆಂಗಳೂರು – ಈ ಎರಡೂ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಪ್ರಬಲವಾಗಿದ್ದರೂ ನಿರೀಕ್ಷಿತ ಸಾಧನೆ ಫಲಿತಾಂಶ ಲಭಿಸಿಲ್ಲ.
ಮೂರು ಬಾರಿ ಐಪಿಎಲ್ ಟಿ20 ಚಾಂಪಿಯನ್‍ಶಿಪ್ ಪಟ್ಟದ ಹೆಗ್ಗಳಿಕೆ ಹೊಂದಿರುವ ಮುಂಬೈ ಇಂಡಿಯನ್ಸ್ ಈವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಸೋಲಿನಿಂದ ಕಂಗೆಟ್ಟಿದೆ.
ಇತ್ತ ವಿರಾಟ್ ಮುಖಂಡತ್ವದ ಆರ್‍ಸಿಬಿ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಗೆಲುವು ಸಾಧಿಸಿರುವುದು ಒಂದೇ ಒಂದು ಪಂದ್ಯ ಮಾತ್ರ. ಹೀಗಾಗಿ ನಾಳಿನ ಪಂದ್ಯ ಎರಡೂ ತಂಡಗಳಿಗೂ ಒಂದು ರೀತಿಯ ಮಹತ್ವದ್ದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ