ಹೈದರಾಬಾದ್, ಏ.16-ಮುತ್ತಿನನಗರಿ ಹೈದರಾಬಾದ್ನಲ್ಲಿ 11 ವರ್ಷಗಳ ಹಿಂದೆ ಒಂಭತ್ತು ಜನರ ಬಲಿ ಪಡೆದಿದ್ದ ಮೆಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣದ ಎಲ್ಲ ಐವರು ಆರೋಪಿಗಳನ್ನು ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ನ್ಯಾಯಾಲಯ ಇಂದು ಖುಲಾಸೆಗೊಳಿಸಿದೆ.
ನಬಕುಮಾರ್ ಸಿರ್ಕರ್ ಅಲಿಯಾಸ್ ಸ್ವಾಮಿ ಅಸೀಮಾನಂದ, ದೇವೇಂದ್ರ ಗುಪ್ತ, ಲೋಕೇಶ್ ಶರ್ಮ ಅಲಿಯಾಸ್ ಅಜಯ್ ತಿವಾರಿ, ಭರತ್ ಮೋಹನ್ಲಾಲ್ ರಿತೇಶ್ವರ್ ಅಲಿಯಾಸ್ ಭರತ್ ಭಾಯ್ ಮತ್ತು ರಾಜೇಂದರ್ ಚೌಧರಿ ಇವರನ್ನು ಖುಲಾಸೆಗೊಳಿಸಲಾಗಿದೆ.
ಹೈದರಾಬಾದ್ನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಮೇ 18, 2007ರಂದು ಶುಕ್ರವಾರ ಬಾಂಬ್ ಸ್ಫೋಟ ನಡೆದಿತ್ತು. ಪೈಪ್ ಬಾಂಬ್ ಬಳಸಿ ನಡೆದ ಈ ದಾಳಿಯಲ್ಲಿ ಒಂಭತ್ತು ಮಂದಿ ಮೃತಪಟ್ಟು 58 ಮಂದಿ ಗಾಯಗೊಂಡಿದ್ದರು. ನಂತರ ನಡೆದ ಗಲಭೆಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಪೆÇಲೀಸರು ನಡೆಸಿದ ಗೋಲಿಬಾರ್ನಲ್ಲಿ ಇತರ ಐವರು ಹತರಾಗಿದ್ದರು.
ಐವರು ಆರೋಪಿಗಳಲ್ಲಿ ಯಾರೊಬ್ಬರ ಆರೋಪವನ್ನು ಸಾಬೀತು ಮಾಡುವಲ್ಲಿ ಎನ್ಐಎ ವಿಫಲವಾಗಿದೆ. ಸಾP್ಷÁ್ಯಧಾರಗಳ ಕೊರತೆಯಿಂದಾಗಿ ಎಲ್ಲರನ್ನೂ ಈ ಪ್ರಕರಣದಿಂದ ದೋಷಮುಕ್ತಗೊಳಿಸಲಾಗಿದೆ ಎಂದು ಎನ್ಐಎ ವಿಶೇಷ ನ್ಯಾಯಾಧೀಶರು ಹೇಳಿದರು.
ಈ ಸ್ಫೋಟ ಪ್ರಕರಣದಲ್ಲಿ ಅಭಿನವ್ ಭಾರತ್ ಸಂಘಟನೆಯ ಹತ್ತು ಜನರನ್ನು ಹೆಸರಿಸಲಾಗಿತ್ತು. ನಬಕುಮಾರ್ ಸಿರ್ಕರ್ ಅಲಿಯಾಸ್ ಸ್ವಾಮಿ ಅಸೀಮಾನಂದ, ದೇವೇಂದ್ರ ಗುಪ್ತ, ಲೋಕೇಶ್ ಶರ್ಮ ಅಲಿಯಾಸ್ ಅಜಯ್ ತಿವಾರಿ, ಲಕ್ಷ್ಮಣ ದಾಸ್ ಮಹಾರಾಜ್, ಭರತ್ ಮೋಹನ್ಲಾನ್ ರಿತೇಶ್ವರ ಮತ್ತು ರಾಜೇಂದರ್ ಚೌಧರಿ ಸೇರಿದಂತೆ 10 ಬಲಪಂಥೀಯರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ರಾಮಚಂದ್ರ ಕಲ್ಸಂಗ್ರಾ ಮತ್ತು ಸಂದೀಪ್ ದಂಗೆ ಈಗಲೂ ನಾಪತ್ತೆಯಾಗಿದ್ದಾರೆ. ಈ ಘಟನೆ ನಂತರ ಐವರನ್ನು ಮಾತ್ರ ಬಂಧಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಪ್ರಕರಣದ ಆರೋಪಿ ಆರ್ಎಸ್ಎಸ್ ಕಾರ್ಯಕರ್ತ ಸುನಿಲ್ ಜೋಷಿಗೆ ಗುಂಡಿಕ್ಕಲಾಗಿತ್ತು.
ಸ್ಥಳೀಯ ಪೆÇಲೀಸರು ಆರಂಭಿಕ ತನಿಖೆ ನಡೆಸಿದ ನಂತರ, ಈ ಸ್ಪೋಟ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ದಾಖಲಿಸಿದ್ದ ಸಿಬಿಐ ಅಧಿಕಾರಿಗಳು ತನಿಖೆ ಮುಂದುವರಿಸಿದ್ದರು. ಆದರೆ 2011ರಲ್ಲಿ ಈ ಪ್ರಕರಣದ ತನಿಖೆಯು ಸಿಬಿಐನಿಂದ ಎನ್ಐಎಗೆ ವರ್ಗಾವಣೆಯಾಗಿತ್ತು. ವಿಚಾರಣೆ ವೇಳೆ ಒಟ್ಟು 226 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು ಹಾಗೂ 311 ದಾಖಲೆಪತ್ರಗಳನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ 64 ಮಂದಿ ಸಾಕ್ಷ್ಯ ನುಡಿದಿದ್ದರು.