ಜೆಡಿಯು ಪಕ್ಷದ 15 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು,ಏ.16-ಜೆಡಿಯು ಪಕ್ಷದ ವತಿಯಿಂದ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಯಿತು.

ಬಿಹಾರದ ಮುಖ್ಯಮಂತ್ರಿ ನಿತಿನ್‍ಕುಮಾರ್ ನೇತೃತ್ವದ ಸಂಯುಕ್ತ ಜನತಾ ದಳದ ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಇಂದು ಮೊದಲ ಪಟ್ಟಿಯನ್ನು ಸುದ್ದಿಗೋಷ್ಟಿಯಲ್ಲಿ ಬಿಡುಗಡೆ ಮಾಡಿದರು.

ಚನ್ನಗಿರಿ – ಮಹಿಮಾ ಜೆ.ಪಟೇಲ್, ಅಳಂದ-ಅರುಣ್‍ಕುಮಾರ್ ಸಿ.ಪಾಟೀಲ್, ಕುಂದಗೋಳ-ಅಜರತ್ ಅಲಿಶೇಖ್, ಬಳ್ಳಾರಿನಗರ-ಟಪಾಲ ಗಣೇಶ್, ನವಲಗುಂದ-ಜಿ.ಎನ್.ತೋಟದ್, ರಾಣಿಬೆನ್ನೂರು-ಡಿ.ಕೆ.ಹಿತ್ತಲಮನಿ, ಚಿಕ್ಕನಾಯಕನಹಳ್ಳಿ-ವಿಜಯೇಂದ್ರ ರೆಡ್ಡಿ , ನೆಲಮಂಗಲ-ಬಿ.ರಾಮಯ್ಯ, ಹುಬ್ಬಳ್ಳಿ ಕೇಂದ್ರ-ರಾಜುನಾಯಕ್‍ವಾಡಿ, ಕುಂದಾಪುರ-ರಾಜೀವ್ ಕೋಟ್ಯಾನ್, ದೊಡ್ಡಬಳ್ಳಾಪುರ-ಪುರುಷೋತ್ತಮ್.ಎಸ್, ಗುರು ಮಿಟ್ಕಲ್ -ದೊಡ್ಡಪ್ಪ ಮಾಲಿ ಪಾಟೀಲ್, ಗದಗ-ಎಸ್.ಎಸ್.ರಡ್ಡೇರ, ಹೊಳಲ್ಕೆರೆ-ಎಚ್.ರಾಮಚಂದ್ರಪ್ಪ , ಕೂಡ್ಲಿಗಿ-ಜಿ.ಈಶಪ್ಪ ಅವರ ಹೆಸರುಳ್ಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಎರಡನೇ ಹಂತದ ಪಟ್ಟಿಯನ್ನು ಏ.22ರಂದು ಬಿಡುಗೆಡ ಮಾಡಲು ಉದ್ದೇಶಿಸಲಾಗಿದೆ. ಪಕ್ಷದ ತತ್ವ ಸಿದ್ದಾಂತ ಒಪ್ಪಿಕೊಂಡು, ಚುನಾವಣೆಗೆ ಸ್ಪರ್ಧಿಸಲು ಮುಂದಾಗಬೇಕು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ