ಬೀದರ, ಏ. 16:- ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ವಿಶ್ವಾಸವಿಟ್ಟು ಯದಲಾಪೂರ ಗ್ರಾಮ ಪಂಚಾಯತ್ ಸದಸ್ಯರಾದ ಮಲ್ಲಿಕಾರ್ಜುನ ಬೆಳ್ಳೂರು, ಆನಂದ ಎಸ್.ಎಂ. ಕೃಷ್ಣನಗರ (ಜಮೀಸ್ತಾನಪೂರ), ಬಂಡೆಪ್ಪ ಬಕಚೌಡಿ, ಜಗನ್ನಾಥ ಕೋಳೆ ಅಮಲಾಪೂರ, ಗೋವಿಂದ, ವಿಜಯಕುಮಾರ ಸ್ವಾಮಿ, ಸೇರಿದಂತೆ ಮುಂತಾದ ನೂರಾರು ಪದವಿಧರ ಯುವಕರು, ಗ್ರಾಪಂ. ಸದಸ್ಯರು, ಬೀದರ ದಕ್ಷಿಣ ಕ್ಷೇತ್ರದಲ್ಲಿ ಬರುವ ಖಾಸಂಪೂರ (ಪಿ) ಗ್ರಾಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೆಡಿಎಸ್ ಪಕ್ಷದಲ್ಲಿ ಸೇರ್ಪಡೆಯಾದರು.
ಮಾಜಿ ಸಚಿವ ಹಾಗೂ ಜಡಿಎಸ್ ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷರಾದ ಬಂಡೆಪ್ಪಾ ಖಾಸಂಪೂರ ಅವರು ನೂರಾರು ಯುವ ಪದವಿಧರರಿಗೆ ಜೆಡಿಎಸ್ ಪಕ್ಷದ ಧ್ವಜ್ ನೀಡಿ ಪಕ್ಷದಲ್ಲಿ ಬರ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಪಶು ವಿವಿ ಆಡಳಿತ ಮಂಡಳಿ ಸದಸ್ಯರಾದ ನಾಗಭೂಷಣ ಕಮಠಾಣ, ಜೈನುಖಾನ ಇದ್ದರು.