ಮೈಸೂರು, ಏ.16- ಚುನಾವಣೆ ನೀತಿ-ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 134 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 134 ಪ್ರಕರಣಗಳ ಪೈಕಿ 97 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದ ಅವರು, 3.48 ಲಕ್ಷ ರೂ. ನಗದು, 2 ಬೋರ್ವೆಲ್, ಲಾರಿ, 1 ಮೈಕ್ಸೆಟ್, 4 ವಾಹನಗಳು, ಒಂದು ಪ್ರಚಾರ ವಾಹನ, ಹಾಟ್ಬಾಕ್ಸ್, ಬಾಟಲಿಗಳು, ಭಿತ್ತಿಪತ್ರ ಹಾಗೂ ಕೆಆರ್ ನಗರದಲ್ಲಿ ಟೀ ಶರ್ಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಒಟ್ಟು 386 ದಾಳಿ ನಡೆಸಿದ್ದು, 69 ಮಂದಿಯನ್ನು ಬಂಧಿಸಲಾಗಿದೆ. 3.09 ಲಕ್ಷ ರೂ. ಮೌಲ್ಯದ 1118 ಲೀ.ಲಿಕ್ಕರ್, 1ಕೆಜಿ ಚಿನ್ನ, 2 ಕಾರು, 12 ದ್ವಿಚಕ್ರ ವಾಹನಗಳು, 1 ತ್ರಿಚಕ್ರ ವಾಹನ ಸೇರಿದಂತೆ ಒಟ್ಟು 15 ವಾಹನ ವಶಪಡಿಸಿಕೊಳ್ಳಲಾಗಿದೆ.
ಒಟ್ಟು 8.2 ಕೋಟಿ ರೂ. ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.