ಲಡಾಖ್/ಇಟಾನಗರ್, ಏ.16-ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನಿ ಯೋಧರಿಂದ ಕದನ ವಿರಾಮ ಮತ್ತು ಅಪ್ರಚೋದಿತ ಗುಂಡಿನ ದಾಳಿ ಮುಂದುವರಿದಿರುವಾಗಲೇ, ಇತ್ತ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನಾಪಡೆ ಕ್ಯಾತೆ ಮುಂದುವರಿದಿದೆ.
ಸಿಕ್ಕಿಂನ ಡೋಕ್ಲಂ ಗಡಿಯಲ್ಲಿ 72 ದಿನಗಳ ಸಂಘರ್ಷದ ನಂತರ ಭಾರತದೊಂದಿಗೆ ಶಾಂತಿ ಸ್ಥಾಪನೆ ನಿರ್ಣಯವನ್ನು ಕೈಗೊಂಡಿದ್ದ ಚೀನಾ ಮತ್ತೆ ಅರುಣಾಚಲ ಪ್ರದೇಶದಲ್ಲಿ ಅತಿಕ್ರಮಣ ಮಾಡುತ್ತಿದ್ದು, ವಿವಾದಿತ ರಸ್ತೆಯೊಂದರ ಮರು ನಿರ್ಮಾಣ ಮಾಡುತ್ತಿದೆ.
ಲಡಾಖ್ ಮತ್ತು ಅರುಣಾಚಲ ಪ್ರದೇಶದ ನಡುವಣ ಹಲವಾರು ಸ್ಥಳಗಳಲ್ಲಿ ಕಳೆದ 17 ವಿನಗಳಲ್ಲಿ ಚೀನಾ ಯೋಧರು 21 ಬಾರಿ ನಿಯಮ ಉಲ್ಲಂಘಿಸಿ ಭಾರತದ ಕಡೆಗೆ ನುಸುಳಲು ಯತ್ನಿಸಿದ್ದಾರೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೆÇಲೀಸ್ (ಐಟಿಪಿಬಿ) ಆರೋಪಿಸಿದೆ.
ಇದಲ್ಲದೇ ಚೀನಾದ ಸೇನಾ ಹೆಲಿಕಾಪ್ಟರ್‍ಗಳು ಮೂರು ಬಾರಿ ವಾಯು ಪ್ರದೇಶದ ವ್ಯಾಪ್ತಿಯಲ್ಲಿ ಪ್ರವೇಶಿಸಿ ಉದ್ಧಟತನ ತೋರಿವೆ. ಇನ್ನೊಂದೆಡೆ ಭೂ ಸೇನಾ ಯೋಧರು ಭಾರತೀಯ ಗಡಿ ಭಾಗದ 19. ಕಿ.ಮೀ.ಗಳಲ್ಲಿ ಅತಿಕ್ರಮಣ ಮಾಡಿವೆ.
ಈ ಸಂಬಂಧ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ)ಗೆ ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಮುಂದಿನ ಕ್ರಮಕ್ಕಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಗೌಪ್ಯ ವರದಿಯನ್ನು ನೀಡಿದೆ.