ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ: ರಾಜ್ಯ ಬಿಜೆಪಿ ಘಟಕಕ್ಕೆ ನೆರವಾಗುವ 400ಕ್ಕೂ ಹೆಚ್ಚು ಆಯ್ದ ಸ್ವಯಂಸೇವಕರು ಬೆಂಗಳೂರಿಗೆ ಆಗಮನ

ಬೆಂಗಳೂರು,ಏ.16- ಮೇ 12ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು ರಾಜ್ಯ ಬಿಜೆಪಿ ಘಟಕಕ್ಕೆ ನೆರವಾಗುವ ಸಲುವಾಗಿ ದೇಶಾದ್ಯಂತದ 400ಕ್ಕೂ ಹೆಚ್ಚು ಆಯ್ದ ಸ್ವಯಂಸೇವಕರು ಬೆಂಗಳೂರಿಗೆ ಆಗಮಿಸಿದ್ದಾರೆ.

ಕರ್ನಾಟಕದ ಚುನಾವಣೆಗೆ ಮೇಲ್ವಿಚಾರಣೆ, ಕಾರ್ಯತಂತ್ರ ರಚನೆ ಸಲುವಾಗಿ ಉತ್ತರ ಪ್ರದೇಶ, ಗುಜರಾತ್ ವಿಧಾನಸಭೆ ಚುನಾವಣೆಗಾಗಿ ಕೆಲಸ ಮಾಡಿದ್ದ 100 ವೃತ್ತಿಪರ ಸ್ವಯಂಸೇವಕರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಯ್ಕೆ ಮಾಡಿದ್ದಾರೆ.
ಅಮಿತ್ ಷಾ ಅವರಿಂದ ನೇಮಿಸಲ್ಪಟ್ಟ ಹೆಚ್ಚುವರಿ ಸಿಬ್ಬಂದಿಯ ಕಾರಣದಿಂದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜನಸಂದಣಿಯಿಂದ ಕೂಡಿದೆ. ಗುಜರಾತ್, ಮುಂಬೈ ಮತ್ತು ನವದೆಹಲಿಯಿಂದ ಜನರು ಆಗಮಿಸಿದ್ದು, ಸುಮಾರು 36 ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಮಿತ್ ಷಾ ಅವರ ಖಾಸಗಿ ತಂಡದ 70-80 ಜನರು ರಾಜ್ಯ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪಕ್ಷದ ಕಾರ್ಯಚಟುವಟಿಕೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಪ್ರಮಾಣದ ಜನರು ಭಾಷಾ ಸಮುದಾಯವನ್ನು ಒಳಗೊಂಡಂತೆ ವಿಭಿನ್ನ ಹಿನ್ನೆಲೆಯುಳ್ಳ ಜನರನ್ನು ತಲುಪಲು ತಳಮಟ್ಟದಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಸಾಮಾಜಿಕ ಮಾಧ್ಯಮ, ಹಣಕಾಸು, ಜಾಹೀರಾತು, ವಿಶ್ಲೇಷಣೆ, ಕ್ಷೇತ್ರದ ಪೆÇ್ರಫೈಲಿಂಗ್, ಅಭಿಯಾನದ ವಿನ್ಯಾಸ ಸಂಬಂಧ ಸಹಾಯ ಮಾಡಲು ವಿವರ ವೈಯಕ್ತಿಕ ತಂಡ – ಅಸೋಸಿಯೇಷನ್ ಆಫ್ ಬ್ರಿಲಿಯಂಟ್ ಮೈಡ್ಸ್ (ಎಬಿಎಂ) ಸದಸ್ಯರು ಸಹ ಆಗಮಿಸಿದ್ದಾರೆ
ಉತ್ತರಪ್ರದೇಶ ಹಾಗೂ ಗುಜರಾತ್‍ನಲ್ಲಿ ಈ ತಂಡ ಅಮಿತ್ ಷಾಗೆ ಸಹಾಯ ಮಾಡಿದೆ. ಈಗ ಅವರು ಕರ್ನಾಟಕದಲ್ಲಿದ್ದು, ಚುನಾವಣೆ ಬಳಿಕ ಅವರು ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಿಗೆ ತೆರಳಲಿದ್ದಾರೆ ಎಂದು ಬಿಜೆಪಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಜರಾತ್ ಮೂಲದ ಯುವ ವೃತ್ತಿಪರರು, ಪ್ರತಿ ಕ್ಷೇತ್ರದಲ್ಲೂ ಕೆಲಸ ಮಾಡುತ್ತಿದ್ದಾರೆ. ಸುಮಾರು 150 ಇಂತಹ ಆಯ್ದ ವೃತ್ತಿಪರರು ಮತ್ತು ಸ್ವಯಂಸೇವಕರನ್ನು ಬೆಂಗಳೂರಿನ ಹೊರಗೆ ನಿಯೋಜಿಸಲಾಗಿದೆ.

ಚುನಾವಣೆ ವೇಳೆ ಪಕ್ಷದ ಬಲವರ್ಧನೆಗಾಗಿ ಬೇರೆಡೆಯಿಂದ ಸ್ವಯಂಸೇವಕರನ್ನು ಕರೆಸುವುದು ಸಾಮಾನ್ಯ, ಆದರೆ 2013 ರ ಚುನಾವಣೆಯಲ್ಲಿ ನಾವು ನೋಡಿದ್ದಕ್ಕಿಂತಲೂ ಈ ಸಂಖ್ಯೆಯು ಹೆಚ್ಚಾಗಿದೆ ಎಂದು ಇನ್ನೋರ್ವ ಅಧಿಕಾರಿ ಹೇಳಿದರು.

ಇದರೊಂದಿಗೆ ಬಿಜೆಪಿಯು ಪ್ರತಿ ಲೋಕಸಭಾ ಕ್ಷೇತ್ರದಲ್ಲಿಯೂ ಇಬ್ಬರು ಉಸ್ತುವಾರಿಗಳಿರಲಿದ್ದಾರೆ. ಅದರಲ್ಲಿ ಒಬ್ಬರು ಕರ್ನಾಟಕದವರಾದರೆ ಇನ್ನೊಬ್ಬರು ಹೊರರಾಜ್ಯದವರಾಗಿರಲಿದ್ದಾರೆ. ಪ್ರತಿ ನಾಲ್ಕು ಅಸೆಂಬ್ಲಿ ಕ್ಷೇತ್ರಗಳಿಗೆ ಪಕ್ಷವು ಒಬ್ಬ ಉಸ್ತುವಾರಿಯನ್ನು ನೇಮಕ ಮಾಡಲಿದೆ.ಇದು ಪೂರ್ಣ ಪ್ರಮಾಣದಲ್ಲಿ ಇನ್ನೂ ಜಾರಿಗೆ ಬರಬೇಕಿದೆ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ