149 ಎಂಇಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು ಏ.16- ಎಂಇಪಿ ಅಭ್ಯರ್ಥಿಗಳು ಬಲಿಷ್ಠ ರಾಗಿದ್ದು ಈ ಬಾರಿ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ.ನೌಹೀರಾ ಶೇಕ್ ವ್ಯಕ್ತಪಡಿಸಿದ್ದಾರೆ.

ಹೋಟೆಲ್ ಲಲಿತ್ ಅಶೋಕದಲ್ಲಿ ಇಂದು 20 ಜಿಲ್ಲೆಗಳ 149 ಅಭ್ಯರ್ಥಿಗಳ ಪಟ್ಟಿ ಜತೆಗೆ ತೃತೀಯ ಲಿಂಗಿಗೂ ಒಂದು ಸ್ಥಾನವನ್ನು ಇಂದು ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಅವಕಾಶ ನೀಡಲಾಗಿದೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಾತಿ, ಸಮುದಾಯ, ಧರ್ಮದ ಆಧಾರ ಮೇಲೆ ಟಿಕೆಟ್ ಹಂಚಿಕೆ ಮಾಡಿಲ್ಲ ಲಂಚ ಮತ್ತು ವಸೂಲಿ ಬಾಜಿ, ಮಧ್ಯವರ್ತಿಗಳ ಹಾವಳಿಗೆ ಅವಕಾಶ ಕೊಟ್ಟಿಲ್ಲ ಸಮೀಕ್ಷೆ ಮಾಡಿಸಿ, ಪಾರದರ್ಶಕ ವಾಗಿ ಟಿಕೆಟ್ ನೀಡಲಾಗಿದೆ ಎಂದರು.

 

ಕೇವಲ 3 ತಿಂಗಳ ಅವಧಿಯಲ್ಲೇ ಎಂಇಪಿ ರಾಜ್ಯದ ಉದ್ದಗಲಕ್ಕೂ ಹೊಸ ಸಂಚಲನ ಮೂಡಿಸಿದ್ದು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರಲಿದೆ ಎಂದರು. ಭಾರತ ಬದಲಾಗಬೇಕು, ರಾಜಕೀಯದಲ್ಲಿ ಹೊಸ ನೀರು ಹರಿಯಬೇಕು. ದೇಶ ಎಂದೂ ಕೋಮುಜ್ವಾಲೆಯಲ್ಲಿ ಸಿಕ್ಕಿ ನರಳುವಂತಾಗಬಾರದು.

ಜನರಿಂದ ನಾಯಕರಾಗುತ್ತಾರೆ ನಮ್ಮ ವಿರುದ್ಧ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಭಾರೀ ಹಣವಂತರಾಗಿದ್ದರೂ ಜನ ನಮ್ಮ ಸರಳತೆ, ಕಾರ್ಯಕ್ರಮ ನೋಡಿ ಎಂಇಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಜನ ಬಲದ ಮುಂದೆ ಹಣಬಲ ನಡೆಯುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಳಗಾವಿ, ಕಲಬುರಗಿ, ವಿಜಯಪುರ, ಬೀದರ್, ಕೊಪ್ಪಳ, ಗದಗ, ಧಾರವಾಡ, ಉತ್ತರಕನ್ನಡ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆ ಸೇರಿದಂತೆ ಇಪ್ಪತ್ತು ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಉಳಿದ 10ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿ ನಾಳೆ ಪ್ರಕಟವಾಗಲಿದೆ ಎಂದು ತಿಳಿಸಿದರು.

ಈಗ ಬಿಡುಗಡೆ ಮಾಡಿರುವ ಪಟ್ಟಿ ಅಂತಿಮವಾಗಿದ್ದು ಬದಲಾವಣೆಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ಅಪರಾಧ ಹಿನ್ನೆಲೆ ಪ್ರಕರಣಗಳು ಸಾಬೀತು ಅದಲ್ಲಿ ಅಂತಹ ಅಭ್ಯರ್ಥಿಗಳನ್ನು ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.

ಒಟ್ಟಾರೆ 224 ಕ್ಷೇತ್ರಗಳ ಪೈಕಿ ಮಹಿಳೆಯರಿಗೆ 40, ದಲಿತರಿಗೆ 51, ರೈತರಿಗೆ 7 ಹಾಗೂ ತೃತೀಯ ಲಿಂಗೆಗೆ ಒಂದು ಟಿಕೆಟ್ ನೀಡಲಾಗುತ್ತಿದೆ ಎಂದು ವಿವರಿಸಿದರು

ಒಟ್ಟು 149 ಅಭ್ಯರ್ಥಿಗಳ ಪಟ್ಟಿ ಹೀಗಿವೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ