ಮೀರತ್, ಏ.16-ಕತುವಾ, ಉನ್ನಾವೊ ಮತ್ತು ಸೂರತ್ ಅತ್ಯಾಚಾರ ಪ್ರಕರಣಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವಾಗಲೇ. ಉತ್ತರ ಪ್ರದೇಶದಲ್ಲೂ ಇಬ್ಬರು ಬಾಲಕಿಯರೂ ಸೇರಿದಂತೆ ಮೂವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಕೈರಾನಾ ಕೊತ್ವಾಲಿ ಜಿಲ್ಲೆಯ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿ ಮನೆಗೆ ಹಿಂದಿರುಗುತ್ತಿದ್ದ 14 ವರ್ಷದ ಬಾಲಕಿ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಇದೇ ಪ್ರದೇಶದ ಭರಾಲಾ ಗ್ರಾಮದಲ್ಲಿ ಮೂವರು ಕಾಮುಕರು ಮನೆ ಬಳಿ ಜಾನುವಾರುಗಳಿಗೆ ಹುಲ್ಲು ಹಾಕುತ್ತಿದ್ದ 23 ವರ್ಷದ ಮಹಿಳೆಯೊಬ್ಬರ ಮೇಲೆ ಗ್ಯಾಂಗ್‍ರೇಪ್ ಮಾಡಿ ಪರಾರಿಯಾಗಿದ್ದಾರೆ.
ಕುಂದ್ಲಾ ಪೆÇಲೀಸ್ ಠಾಣೆಯ ಮಾಲಕಪುರ ಗ್ರಾಮದಲ್ಲಿ ಬಾಲಕಿಯೊಬ್ಬಳ ಮೇಲೂ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಆಕೆಯ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.