11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಮತ್ತೊಂದು ಪೈಶಾಚಿಕ ಕೃತ್ಯ

ಸೂರತ್, ಏ.15-ಕಾಶ್ಮೀರದ ಕತುವಾದಲ್ಲಿ 8 ವರ್ಷ ಬಾಲಕಿಯ ಗ್ಯಾಂಗ್‍ರೇಪ್ ಮತ್ತು ಭೀಕರ ಕಗ್ಗೊಲೆಯಿಂದ ದೇಶ ಬೆಚ್ಚಿ ಬಿದ್ದಿರುವಾಗಲೇ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಗುಜರಾತ್‍ನ ಸೂರತ್‍ನಲ್ಲಿ ಈ ಘೋರ ಘಟನೆ ನಡೆದಿದ್ದು, 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ನಿರ್ದಯವಾಗಿ ಕೊಲ್ಲಲಾಗಿದೆ.
ಬಾಲಕಿಯ ದೇಹದ ಮೇಲೆ 86ಕ್ಕೂ ಹೆಚ್ಚು ಗಾಯದ ಗುರುತುಗಳಿದ್ದು, ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ನಂತರ ಚಿತ್ರ ಹಿಂಸೆ ನೀಡಿ ಕೊಲ್ಲಲಾಗಿದೆ. ಒಂದು ವಾರ ಕಾಲ ಆಕೆಗೆ ಹಿಂಸೆ ನೀಡಿ ಕೊಂದಿರುವ ಬಗ್ಗೆ ಪ್ರಾಥಮಿಕ ವರದಿಗಳು ದೃಢಪಡಿಸಿವೆ.
ಮರದ ಆಯುಧಗಳನ್ನು ಬಳಸಿ ಬಾಲಕಿಗೆ ಚಿತ್ರಹಿಂದೆ ನೀಡಲಾಗಿದೆ. ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಆಕೆಯ ಮೇಲೆ ಒಂದರಿಂದ ಏಳು ದಿನಗಳ ಒಳಗಿನ ಗಾಯಗಳು ಇರುವುದು ಕಂಡುಬಂದಿವೆ. ಒಂದು 86 ಗಾಯದ ಗುರುತುಗಳಿವೆ ಎಂದು ಸೂರತ್ ಸಿವಿಲ್ ಆಸ್ಪತ್ರೆಯ ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥರು ಹೇಳಿದ್ಧಾರೆ.
ಬಾಲಕಿಯ ಗುರುತು ಪತ್ತೆಯಾಗಿಲ್ಲ. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ