ಕೆಂಪಾಪುರ ದಾಸರಹಳ್ಳಿಯಿಂದ ಕಾಣೆಯಾಗಿದ್ದ ಹತ್ತು ವರ್ಷದ ಇಬ್ಬರು ಬಾಲಕಿಯರು ಮೈಸೂರಿನಲ್ಲಿ ಪತೆ

ಬೆಂಗಳೂರು,ಏ.15- ಕೆಂಪಾಪುರ ದಾಸರಹಳ್ಳಿಯಿಂದ ಕಾಣೆಯಾಗಿದ್ದ ಹತ್ತು ವರ್ಷದ ಇಬ್ಬರು ಬಾಲಕಿಯರು ಮೈಸೂರಿನಲ್ಲಿ ಪತ್ತೆಯಾಗಿದ್ದಾರೆ.
ಅಮೃತಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ ಕೆಂಪಾಪುರ ದಾಸರಹಳ್ಳಿಯಿಂದ ಬಾಲಕಿಯರು ನಾಪತ್ತೆಯಾಗಿದ್ದರು. ಈ ಸಂಬಂಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇಂದು ಈ ಇಬ್ಬರು ಬಾಲಕಿಯರು ಮೈಸೂರಿನಲ್ಲಿ ಪತ್ತೆಯಾಗಿದ್ದು, ಅವರನ್ನು ಪೆÇಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಬಾಲಕಿಯರು ನಾಪತ್ತೆಯಾಗಲು ಕಾರಣ ತಿಳಿದು ಬಂದಿಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ