ಲಕ್ನೋ, ಏ.14- ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ದಲಿತ ಮಿತ್ರ ಪ್ರಶಸ್ತಿ ನೀಡಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಯೋಗಿ ಆದಿತ್ಯನಾಥ್‍ರನ್ನು ದಲಿತ ವಿರೋಧಿ ಎಂದು ಕರೆದಿರುವ ಅನೇಕರು, ಈ ಪ್ರಶಸ್ತಿಗೆ ಯೋಗಿ ಆದಿತ್ಯನಾಥ ಸೂಕ್ತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಮಹಾಸಭಾವು ದಲಿತ ವಿರೋಧಿಯೊಬ್ಬರಿಗೆ ಇಂಥ ಪ್ರಶಸ್ತಿ ನೀಡುತ್ತಿರುವುದು ನೋವುಂಟು ಮಾಡಿದೆ ಎಂದು ದಲಿತ ನಾಯಕರಾದ ಎಸ್ ಆರ್ ದಾರಾಪುರಿ, ನಿವೃತ್ತ ಐಎಎಸ್ ಅಧಿಕಾರಿ ಚಂದ್ರಾ, ಗಜೋಧರ್ ಪ್ರಸಾದ್, ಎನ್ ಎಸ್ ಚೌರಾಸಿಯಾ ಆರೋಪಿಸಿದ್ದು, ಈಗ ಇವರೆಲ್ಲನ್ನೂ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ದಲಿತರ ಮೇಲೆ ಒಂದು ವರ್ಷದಿಂದ ನಿರಂತರ ದೌರ್ಜನ್ಯ ನಡೆಯುತ್ತಿರುವಾಗ ಯೋಗಿ ಆದಿತ್ಯನಾಥ್ ಅವರಿಗೆ ಇಂಥ ಪ್ರಶಸ್ತಿ ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.