![Crash_Header_1494883828](http://kannada.vartamitra.com/wp-content/uploads/2018/04/Crash_Header_1494883828-610x381.jpg)
ಬೆಂಗಳೂರು, ಏ.14-ಕಾರು ಚಾಲಕನ ಅಜಾಗರೂಕತೆಯಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿರುವ ಘಟನೆ ರಾಮಮೂರ್ತಿನಗರದ ರಿಂಗ್ ರಸ್ತೆಯಲ್ಲಿ ನಡೆದಿದೆ.
ಟಿನ್ ಫ್ಯಾಕ್ಟರಿ ಕಡೆ ಹೋಗುವ ಮಾರ್ಗದಲ್ಲಿ ಝೂಮ್ ಕಂಪೆನಿ ಕಾರಿನ ಚಾಲಕ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ ಇಂಡಿಕಾ ಮತ್ತು ಝೂಮ್ ಕಾರಿನ ನಡುವೆ ಅಪಘಾತ ಸಂಭವಿಸಿ ಕಾರು ರಸ್ತೆ ಮಧ್ಯೆ ಪಲ್ಟಿಯಾಗಿ ಉರುಳಿ ಬಿದ್ದಿದೆ. ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಕಸ್ತೂರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.