
ನವದೆಹಲಿ, ಏ.14- ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಇನ್ನೂ ಮೂರು ಬಾರಿ ಭೇಟಿ ಕೊಡಲಿದ್ದಾರೆ.
ಎಐಸಿಸಿ ಮೂಲಗಳು ದೆಹಲಿಯಲ್ಲಿಂದು ಈ ವಿಷಯ ಖಚಿತಪಡಿಸಿವೆ.
ಕರ್ನಾಟಕದ ವಿವಿಧ ರಾಜ್ಯಗಳಲ್ಲಿ ಜನಾಶೀರ್ವಾದ ರ್ಯಾಲಿ ಸಂದರ್ಭದಲ್ಲಿ ತಮಗೆ ಜನರಿಂದ ದೊರೆತ ಭಾರೀ ಬೆಂಬಲದಿಂದ ಪ್ರಭಾವಿತರಾಗಿರುವ ರಾಹುಲ್ ಮತ್ತೆ ಕನಿಷ್ಟ ಮೂರು ಬಾರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಪರ ಮತ ಕೋರಲಿದ್ದಾರೆ.