ಅಂಕೋಲಾದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತದಾರ ನೀಡಿದ್ದೇನು?

ಅಂಕೋಲಾ,ಏ.14

ಅಭ್ಯರ್ಥಿಗಳು ಮತಕ್ಕಾಗಿ  ಮತದಾರರಿಗೆ 500,1000..ಹೀಗೆ ಹಣ ಹಂಚುವುದು ಕೇಳಿದ್ದೀರಿ… ಅಥವಾ ನೋಡಿರಬಹುದು. ಆದರೆ ಅಂಕೋಲಾದಲ್ಲಿ ಮತದಾರರೊಬ್ಬರು ಅಭ್ಯರ್ಥಿಗೆ 500 ರೂ. ನೀಡಿ  ಗಮನ ಸೆಳೆದಿದ್ದಾರೆ.

ಅಂಕೋಲಾದ ಲಕ್ಷ್ಮೀಶ್ವರ ನಗರ ನಿವಾಸಿ ಪ್ರಕಾಶ್‌ ನಾಯ್ಕ ಅವರು ಮತ ಕೇಳಲು ಮನೆಗೆ ಬಂದ ಮಾಜಿ ಸಚಿವ,ಕಾರವಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆನಂದ್‌ ಅಸ್ನೋಟಿಕರ್‌ ಅವರಿಗೆ 500 ರೂ. ನೀಡಿ  ನಿಮಗೆ ಮತ ಹಾಕುತ್ತೇನೆ ಎಂದಿದ್ದಾರೆ.

ಚುನಾವಣೆ ಬಂದಾಗ ರಾಜಕಾರಣಿಗಳು ಜನರಿಗೆ ಹಣ ನೀಡುತ್ತಾರೆ. ಆ ಪ್ರಕ್ರಿಯೆ ನಿಲ್ಲಬೇಕು. ಹೀಗಾಗಿ  ಅಭ್ಯರ್ಥಿಗೆ ನಾನು ದುಡಿದ ಹಣ ನೀಡಿದ್ದೇನೆ ಎಂದಿದ್ದಾರೆ.

ಕಾರವಾರದಲ್ಲಿ ಈ ಬಾರಿ  ಬಿಜೆಪಿಯಿಂದ ರೂಪಾಲಿ ನಾಯ್ಕ, ಕಾಂಗ್ರೆಸ್‌ನಿಂದ ಹಾಲಿ  ಶಾಸಕ ಸತೀಶ್‌ ಸೈಲ್‌ ಮತ್ತು ಆನಂದ್‌ ಅಸ್ನೋಟಿಕರ್‌ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ