ಬೆಂಗಳೂರು:ಏ-೧೩: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಇಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರನ್ನು ಭೇಟಿಯಾಗಿದ್ದು ತೃತೀಯ ರಂಗ ರಚನೆ ಕುರಿತು ಹಲವಾರು ಕುತೂಹಲ ಮೂಡಿಸಿದೆ.
ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ಕೆಸಿ ಆರ್ ಅವರನ್ನು ಸ್ವತ: ದೇವೇಗೌಡರೇ ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ಇಬ್ಬರೂ ಉಭಯ ಕುಶಲೋಪರಿ ನಡೆಸಿದರು. ಕೆಸಿಆರ್ ಜತೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಅವರೂ ಕೂಡ ಉಪಸ್ಥಿತರಿದ್ದರು.
ದೇವೇಗೌಡರು ಮತ್ತು ಕೆಎಸ್ಆರ್ ನಡುವಿನ ಈ ಭೇಟಿ ರಾಷ್ಟ್ರ ರಾಜಕಾರಣ ಮತ್ತು ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೆ ತೃತಿಯ ರಂಗವನ್ನು ಬಲಪಡಿಸುವುದು ಮತ್ತು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ಭಾಷಿಕರು ಜೆಡಿಎಸ್ ಬೆಂಬಲಿಸುವ ಕುರಿತಾದ ವಿಚಾರಗಳು ಚರ್ಚೆಯಾಗಿವೆ ಎಂದು ತಿಳಿದುಬಂದಿದೆ.
ತೃತೀಯ ರಂಗಕ್ಕೆ ಶೀಘ್ರದಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಚತ್ತಿಸ್ಸಘಡ ಸಿ.ಎಂ ರಮಣ ಸಿಂಗ್ ರೂಂದಿಗೆ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ. ಮಧ್ಯಾಹ್ನ ಎರಡು ಗಂಟೆಗೆ ಲೀಲಾ ಪ್ಯಾಲೇಸ್ ನಲ್ಲಿ ಬೆಂಗಳೂರು ನಗರದಲ್ಲಿ ನೆಲೆಸಿರುವ ತೆಲಂಗಾಣ ರಾಜ್ಯದ ಜನತೆಯೂಂದಿಗೆ ಮಾತುಕತೆ ಕೂಡ ನಡೆದಿದೆ.
Telangana CM K Chandrasekhar Rao, Former PM Deve Gowda Meet, federal front talks