ಬೆಂಗಳೂರು, ಏ.13-ಬ್ಯಾಂಕಿಂಗ್ ವಲಯದಲ್ಲಿ ಮುಂಚೂಣಿಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ತನ್ನ ಎಂಸಿಎಲ್ಆರ್(ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ಅಥವಾ ನಿಧಿ ಆಧರಿತ ಹಣ ನೀಡಿಕೆ ಮೇಲಿನ ಕನಿಷ್ಠ ವೆಚ್ಚ) ದರವನ್ನು ಯಥಾಸ್ಥಿತಿಯಲ್ಲಿಯೇ ಮುಂದುವರಿಸಿದೆ.
ಎಂಸಿಎಲ್ಆರ್ನನ್ನು ಪರಾಮರ್ಶೆಗೆ ಒಳಪಡಿಸಿದ ಸಿಂಡಿಕೇಟ್ ಬ್ಯಾಂಕ್ ಆ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.
ಎಲ್ಲ ಟೆನರ್ಗಳು ಅಂದರೆ ಎಂಸಿಎಲ್ಆರ್ ನಿಗದಿ ದರಗಳನ್ನು ಹಿಂದೆ ನಿಗದಿಗೊಳಿಸಿರುವಂತೆಯೇ ಮುಂದುವರಿಯಲಿದೆ. ಒವರ್ನೈಟ್ ಟೆನರ್(ಶೇ.7.95), ಮಾಸಿಕ ಟೆನರ್(ಶೇ.8.00), ತ್ರೈಮಾಸಿಕ ಟೆನರ್(ಶೇ.8.05), ಆರು ತಿಂಗಳ ಟೆನರ್(ಶೇ.8.25) ಹಾಗೂ ಒಂದು ವರ್ಷದ ಟೆನರ್(ಶೇ.8.45) ಇವು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಗ್ರಾಹಕರ ಹಿತದೃಷ್ಟಿಯಿಂದ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸಿಂಡಿಕೇಟ್ ಬ್ಯಾಂಕ್ ಪ್ರಕಟಣೆ ತಿಳಿಸಿದೆ.