ಇಸ್ಲಾಮಾಬಾದ್, ಏ.13-ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್‍ರನ್ನು ಅಧಿಕಾರದಿಂದ ಜೀವನ ಪರ್ಯಂತ ಅನರ್ಹಗೊಳಿಸಿ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನೊಂದಿಗೆ ಪಾಕಿಸ್ತಾನದ ಪ್ರಬಲ ನಾಯಕ ನವಾಜ್ ರಾಜಕೀಯ ಜೀವನ ಕೊನೆಗೊಂಡಂತಾಗಿದೆ.
ಸಂವಿಧಾನದ ಅಡಿ ನವಾಜ್‍ರನ್ನು ಅಧಿಕಾರ ಹೊಂದುವುದರಿಂದ ಆಜೀವ ನಿಷೇಧ ಹೇರಲಾಗಿದೆ ಎಂದು ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠ ಇಂದು ಮಹತ್ವದ ಆದೇಶ ನೀಡಿದೆ. ಸಂವಿಧಾನದ ಅಡಿ ಸಂಸದರ ಅನರ್ಹತೆ ಅವಧಿ ಕುರಿತು ನಿರ್ಣಯಿಸುವ ಸಂಬಂಧ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಈಗಾಗಲೇ ಬಹುಕೋಟಿ ರೂ. ಪನಾಮ ಆಸ್ತಿ ಹಗರಣ ಸಂಬಂಧ ಪದಚ್ಯುತಗೊಂಡಿರುವ ನವಾಜ್ ಷರೀಫ್ ಅವರ ರಾಜಕೀಯ ಭವಿಷ್ಯ ಈ ತೀರ್ಪಿನಿಂದ ಮುಕ್ತಾಯಗೊಂಡಂತಾಗಿದೆ.