
ಬೆಂಗಳೂರು, ಏ.13- ಬಾರ್ವೊಂದರ ಬಳಿ ನಿಂತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ರಾಮಮೂರ್ತಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಂಜಾರಲೇಔಟ್ ನಿವಾಸಿಗಳಾದ ಫೈರೋಜ್(35) ಮತ್ತು ಅಮ್ಜದ್ (45) ಹಲ್ಲೆಯಿಂದ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ರಾತ್ರಿ 12.30ರ ಸಮಯದಲ್ಲಿ ರಿಂಗ್ ರಸ್ತೆಯ ಕಲ್ಕೆರೆಯಲ್ಲಿ ಬಾರ್ವೊಂದರ ಬಳಿ ಫೈರೋಜ್ ಮತ್ತು ಅಮ್ಜದ್ ಮಾತನಾಡುತ್ತಾ ನಿಂತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಇವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ರಾಮಮೂರ್ತಿನಗರ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.