ನವದೆಹಲಿ:ಏ-13: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ದಿ.ನಟ ವಿನೋದ್ ಖನ್ನಾರಿಗೆ ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಸಲದ 2017ರ ಅತ್ಯುತ್ತಮ ನಟ ಪ್ರಶಸ್ತಿಗೆ ‘ರುಸ್ತುಂ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷಯ್ ಕುಮಾರ್ ಭಾಜನರಾಗಿದ್ದಾರೆ. ಅತ್ಯುತ್ತಮ ನಟಿಯಾಗಿ ‘ಮಾಮ್’ ಚಿತ್ರದಲ್ಲಿನ ಅಭಿನಯಕ್ಕೆ ದಿವಂಗತ ತಾರೆ ಶ್ರೀದೇವಿ ಭಾಜನರಾಗಿದ್ದಾರೆ.
ಅತ್ಯುತ್ತಮ ರಾಷ್ಟ್ರೀಯ ಏಕೀಕರಣ ನರ್ಗೀಸ್ ದತ್ ಪ್ರಶಸ್ತಿ ಮರಾಠಿಯ ಧಪ್ಪಾ ಪಾಲಾಗಿದ್ದು, ಇರಾದಾ ಚಿತ್ರದ ಅತ್ಯುತ್ತಮ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ದಿವ್ಯಾದತ್ತ ಅವರು ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಹಿನ್ನಲೆ ಗಾಯನ ಪ್ರಶಸ್ತಿಗೆ ಕಾಟ್ರು ವೆಲಿಯಿಡೈ ಚಿತ್ರದ ಹಿನ್ನಲೆ ಗಾಯಕರಾದ ಶಾಶಾ ತ್ರಿಪಾಠಿ ಭಾಜನರಾಗಿದ್ದಾರೆ. ಪುರುಷರ ಅತ್ಯುತ್ತಮ ಹಿನ್ವಲೆಯ ಗಾಯಕ ಪ್ರಶಸ್ತಿ ಖ್ಯಾತ ಗಾಯಕ ಏಸುದಾಸ್ ಅವರ ಪಾಲಾಗಿದ್ದು, ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಮ್ಹೋರ್ಕೋಯಾ ಭಾಜನವಾಗಿದೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಮೇ 3, 2018ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುರಸ್ಕೃತರಿಗೆ ನೀಡಿ ಗೌರವಿಸಲಿದ್ದಾರೆ.
National Film Awards 2018,Vinod Khanna,Dadasaheb Phalke Award