ಬೆಂಗಳೂರು,ಏ.13- ಎಂ.ಜಿ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿನ ವೆಬ್ಸ್ಗ್ರೌಂಡ್ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೆಕೆಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ಜೆ.ಆರ್. ಪೆರೇರಾ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾ.6ರಂದು ಬೆಂಗಳೂರು ಕ್ಯಾಥೋಲಿಕ್ ಮಹಧರ್ಮದ ಟ್ರಸ್ಟ್ಗೆ ಸೇರಿದ ವೆಬ್ಗ್ರೌಂಡ್ ಆಸ್ತಿಯಲ್ಲಿ 60 ಸಾವಿರ ಚದರ ಅಡಿ ನೆಲವನ್ನು ಕರ್ನಾಟಕ ಪ್ರಾಂತ್ಯದ ಏಸು ಸಭೆಯವರಿಗೆ ನಗರದ ಧರ್ಮ ಪ್ರಾಂತ್ಯದ ಅರ್ಥ್ ವಿಷ್ ಬರ್ನಾಡ್ ಮೊರಾರ್ ಅವರು ಗಿಫ್ಟ್ ಡೀಡ್ ಮಾಡಿದ್ದಾರೆಂದು ಆರೋಪಿಸಿದರು.
ಇದು ಕಾನೂನಿಗೆ ವಿರುದ್ಧವಾದ ಪ್ರಕ್ರಿಯೆಯಾಗಿದ್ದು, ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಗಿಫ್ಟ್ ಡೀಡ್ ಹಿಂದೆ ಮರೆಯಾಗಿರುವ ಬಹುದೊಡ್ಡ ವಿಷಯವೆಂದರೆ ಸಂತ ಜೋಸೆಫ್ರ ವಿದ್ಯಾಸಂಸ್ಥೆಗಳ ಒಡೆತನವು ಬೆಂಗಳೂರು ಮಹಾಧರ್ಮ ಪ್ರಾಂತ್ಯಕ್ಕೆ ಸೇರಿದ್ದಾಗಿದೆ. ಹೀಗಿರುವಾಗ ಸಂತ ಜೋಸೆಫ್ ಕಾಲೇಜಿನ ಪ್ರವೈಟ್ ಯುನಿವರ್ಸಿಟಿಯಾಗಿ ಮಾಡುವ ಜವಾಬ್ದಾರಿಯನ್ನು ಮಹಾಧರ್ಮ ಪ್ರಾಂತ್ಯಕ್ಕೆ ಸೇರಿದಾಗಿದೆ ಎಂದರು.
ನಿಬಂಧನೆಗಳನ್ನು ಪೂರೈಸಬೇಕಾದ ಜವಾಬ್ದಾರಿ ಬೆಂಗಳೂರು ಮಹಾಧರ್ಮ ಪ್ರಾಂತ್ಯಕ್ಕೆ ಸೇರಿದ್ದರೆ ಕಾಸ್ಟ್ ಡೀಡ್ ನಾಟಕವೇಕೆ ಎಂದು ಪ್ರಶ್ನಿಸಿದರು.
ಈ ಸತ್ಯ ಸಂಗತಿ ಮಹಾಧರ್ಮ ಪ್ರಾಂತ್ಯದ ಮಹಾ ಜ್ಞಾನಿ ಜಯನಾದಾನ್ ಅವರಿಗೆ ಹೊಳೆದಿಲ್ಲ ಏಕೆ ಎಂದರು.
ಸಂತ ಜೋಸೆಫರ ವಿದ್ಯಾಸಂಸ್ತೆಗಳ ಸಂಪೂರ್ಣ ಒಡೆತನವನ್ನು ಏಸು ಸಭೆಯವರಿಗೆ ಯಾವುದೇ ತೊಂದರೆ ಇಲ್ಲದೆ ವರ್ಗಾಯಿಸುವ ತಂತ್ರವೇ ಈ ಗಿಫ್ಟ್ ಡೀಡ್ ನಾಟಕ ಎಂದು ಆರೋಪಿಸಿದರು.