![download (2)](http://kannada.vartamitra.com/wp-content/uploads/2018/04/download-2-10-678x339.jpg)
ಗೋಲ್ಡ್‍ಕೋಸ್ಟ್, ಏ.10-ಕಾಮನ್‍ವೆಲ್ತ್ ಕ್ರೀಡಾಕೂಟದ ಆರನೇ ದಿನ ಪುರುಷರ ವಿಭಾಗದ ಹಾಕಿ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿ ಸೆಮಿಫೈನಲ್ ತಲುಪಿದೆ.
ತೀವ್ರ ಪೈಪೆÇೀಟಿಯ ಪಂದ್ಯದಲ್ಲಿ ಮಲೇಷ್ಯಾ ಸವಾಲನ್ನು ಸಮರ್ಥವಾಗಿ ಎದುರಿಸಿದ ಭಾರತೀಯ ಹಾಕಿ ಆಟಗಾರರು ನಾಲ್ಕನೇ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಜಯಗಳಿಸಿದರು.
ಭಾರತ ತನ್ನ ಗುಂಪಿನ ಕೊನೆ ಪಂದ್ಯದಲ್ಲಿ ಪ್ರಬಲ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಸ್ಕಾಷ್ ಶುಭಾರಂಭ: ಭಾರತದ ಜೋತ್ಸ್ಯಾ ಚಿನ್ನಪ್ಪ-ದೀಪಿಕಾ ಪಲ್ಲಿಕಲ್ ಜೋಡಿ ಸ್ಕ್ವಾಷ್ ಪಂದ್ಯದಲ್ಲಿ ಶುಭಾರಂಭ ಮಾಡಿದ್ದಾರೆ. ಪಾಕಿಸ್ತಾನದ ಫೈಜಾ ಜಾಫರ್ ಮತ್ತು ಮದೀನಾ ಜಾಫರ್ ವಿರುದ್ಧ ಈ ಜೋಡಿ 10-11, 11-0, 11-1ರಲ್ಲಿ ಜಯಗಳಿಸಿ ಮುಂದಿನ ಹಂತ ಪ್ರವೇಶಿಸಿದರು.