ಬೆಂಗಳೂರು, ಏ.13- ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ವೆಂಕಿ ಅಲಿಯಾಸ್ ವೆಂಕಟೇಶ (42)ನನ್ನು ಗೂಂಡಾ ಕಾಯ್ದೆಯಡಿ ಗಂಗಮ್ಮನಗುಡಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಈತ ನಗರದ ಗಂಗಮ್ಮನಗುಡಿ, ಯಶವಂತಪುರ, ಜಾಲಹಳ್ಳಿ, ಸೋಲದೇವನಹಳ್ಳಿ, ವಿದ್ಯಾರಣ್ಯಪುರ, ಸಂಪಿಗೆಹಳ್ಳಿ ಠಾಣೆಗಳಲ್ಲಿ ಸಕ್ರಿಯವಾಗಿ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಕೊಲೆ, ಸುಲಿಗೆ, ದರೋಡೆಗೆ ಯತ್ನ, ಕಳ್ಳತನ ಹಾಗೂ ಇತರೆ ಕಾನೂನು ಬಾಹೀರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುಮಾರು 25 ಪ್ರಕರಣಗಳು ದಾಖಲಾಗಿವೆ.
1993ರಿಂದ ಈತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಸೋಮಶೆಟ್ಟಿಹಳ್ಳಿ ಗ್ರಾಪಂ ಸದಸ್ಯನಾಗಿದ್ದರೂ ಸಹ ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿದ್ದನು.
ಈತನ ವರ್ತನೆಗಳು ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದ್ದವು. ಗೂಂಡಾಕಾಯ್ದೆಯಡಿ ಈತನನ್ನು ಬಂಧಿಸಲು ಸಹಾಯಕ ಪೆÇಲೀಸ್ ಆಯುಕ್ತ ರವಿಪ್ರಸಾದ್ ವರದಿ ಸಲ್ಲಿಸಿದ್ದರು.
ಸದರಿ ವರದಿ ಪರಿಶೀಲಿಸಿದ ನಗರ ಪೆÇಲೀಸ್ ಆಯುಕ್ತರು, ಈತನನ್ನು ಗೂಂಡಾಕಾಯ್ದೆಯಡಿ ಬಂಧಿಸಲು ಆದೇಶಿಸಿದ್ದರು.