ಕೋಲಾರ, ಏ.12-ಚುನಾವಣೆ ಹಿನ್ನೆಲೆಯಲ್ಲಿ ನಿರ್ಮಿಸಲಾಗಿರುವ ಚೆಕ್ಪೆÇೀಸ್ಟ್ ಬಳಿ ಹಣ ವಸೂಲಿ ಮಾಡುತ್ತಿದ್ದರೆಂಬ ಆರೋಪದ ಮೇಲೆ ಮೂವರು ಪೆÇಲೀಸರನ್ನು ಅಮಾನತು ಮಾಡಿ ಕೆಜಿಎಫ್ ಎಸ್ಪಿ ಲೋಕೇಶ್ ಕುಮಾರ್ ಆದೇಶಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆಗಾಗಿ ಬಂಗಾರಪೇಟೆ ತಾಲ್ಲೂಕಿನ ದಿಂಬ ಬಳಿ ಚೆಕ್ಪೆÇೀಸ್ಟ್ ನಿರ್ಮಿಸಲಾಗಿದೆ. ಈ ಚೆಕ್ಪೆÇೀಸ್ಟ್ ಬಳಿ ಕಳೆದ ನಾಲ್ಕೈದು ದಿನಗಳಿಂದ ಪೆÇಲೀಸರು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ವರದಿ ಪಡೆದಿದ್ದ ಕೆಜಿಎಫ್ ಎಸ್ಪಿ ಲೋಕೇಶ್ಕುಮಾರ್ ಅವರು ತನಿಖೆ ನಡೆಸಿ, ಎಎಸ್ಐ ರವೀಂದ್ರ, ಕಾನ್ಸ್ಟೇಬಲ್ ಬಾಲಾಜಿಸಿಂಗ್ ಹಾಗೂ ಡಿಎಆರ್ ಕಾನ್ಸ್ಟೇಬಲ್ ಎಂ.ರವೀಂದ್ರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.