ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ಕ್ರೂರ ತಾಲಿಬಾನ್ ಉಗ್ರರ ಅಟ್ಟಹಾಸ :

ಕಾಬೂಲ್, ಏ.12-ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ಕ್ರೂರ ತಾಲಿಬಾನ್ ಉಗ್ರರ ಅಟ್ಟಹಾಸ ಹಾಗೂ ಅವರನ್ನು ಸದೆ ಬಡಿಯುವ ಕಾರ್ಯ ಮುಂದುವರಿದೆ. ನಿನ್ನೆ ಮಧ್ಯರಾತ್ರಿ ಖುಜಾ ಒಮರಿ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಯೊಂದರ ಮೇಲೆ ದಾಳಿ ನಡೆಸಿದ ತಾಲಿಬಾನಿಗಳು ಮೂವರು ಜಿಲ್ಲಾ ಅಧಿಕಾರಿಗಳು ಹಾಗೂ 15 ಯೋಧರ ಮಾರಣಹೋಮ ನಡೆಸಿದ್ದಾರೆ. ಇವರನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ 25ಕ್ಕೂ ಹೆಚ್ಚು ಬಂಡುಕೋರರನ್ನು ಯೋಧರು ಹತ್ಯೆ ಮಾಡಿದ್ದಾರೆ.
ಸರ್ಕಾರಿ ಕಚೇರಿ ಆವರಣದೊಳಗೆ ಪ್ರವೇಶಿಸಿದ ತಾಲಿಬಾಲಿ ಬಂಡುಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಉನ್ನತಾಧಿಕಾರಿಗಳು ಹಾಗೂ 15 ಯೋಧರು ಹತರಾದರು. ನಂತರ ನಡೆದ ದಮನ ಕಾರ್ಯಾಚರಣೆಯಲ್ಲಿ 25 ತಾಲಿಬಾನಿಗಳು ಮೃತಪಟ್ಟರು ಎಂದು ಪೆÇಲೀಸ್ ಮುಖ್ಯಸ್ಥ ರಮಾಝಾನ್ ಅಲಿ ಮೊಸಿನಿ ತಿಳಿಸಿದ್ಧಾರೆ.
ಯೋಧರು, ಪೆÇಲೀಸರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರಿಯಾಗಿಟ್ಟುಕೊಂಡು ತಾಲಿಬಾನ್ ಉಗ್ರರು ದಾಳಿ ನಡೆಸುತ್ತಿರುವ ಕುಕೃತ್ಯಗಳು ತೀವ್ರಗೊಂಡಿದ್ದು, ಅವರನ್ನು ದಮನ ಮಾಡಲು ಭದ್ರತಾಪಡೆಗಳು ಶ್ರಮಿಸುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ