
ಧಾರವಾಡ,ಏ.12
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ರಾತ್ರಿ 1.45ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ.
ಇಂದು ಮತ್ತು ನಾಳೆ ಎರಡು ದಿನ ರಾಜ್ಯದಲ್ಲೇ ಉಳಿಯಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ. ಇವತ್ತು ಹುಬ್ಬಳ್ಳಿ-ಧಾರವಾಡ, ಗದಗ, ನಾಳೆ ಬಾಗಲಕೋಟೆ, ಬೆಳಗಾವಿಯಲ್ಲಿ ಸಮಾವೇಶ ನಡೆಸಲಿದ್ದಾರೆ. ಪ್ರಚಾರ ಕಾರ್ಯಕ್ರಮಗಳ ಮಧ್ಯೆ ಮಠ ಹಾಗೂ ದೇವಾಲಯಗಳಿಗೂ ಭೇಟಿ ನೀಡಲಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ಬಿಜೆಪಿಯವರು ನಡೆಸುತ್ತಿರುವ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲೂ ಅಮಿತ್ ಶಾ ಭಾಗಿಯಾಗಲಿದ್ದಾರೆ.
ಅಮಿತ್ ಶಾ ಇವತ್ತು ಎಲ್ಲೆಲ್ಲಿ ಹೋಗ್ತಾರೆ?
ಬೆಳಗ್ಗೆ 9.30ಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಮಠ
* ಬೆಳಗ್ಗೆ 10.30ಕ್ಕೆ ಧಾರವಾಡದ ಸಾಧನಕೇರಿಯ ದ.ರಾ. ಬೇಂದ್ರೆ ಸ್ಮಾರಕಕ್ಕೆ ಮಾಲಾರ್ಪಣೆ
* ಧಾರವಾಡ ಮುರುಘಾ ಮಠಕ್ಕೆ ಭೇಟಿ, ಸಮಾಲೋಚನೆ
* ಧಾರವಾಡದ ಡಿಸಿ ಕಚೇರಿ ಎದುರು 11 ಗಂಟೆಗೆ 1 ತಾಸು ಉಪವಾಸ
* ಮಧ್ಯಾಹ್ನ 12.30ಕ್ಕೆ ಗದಗನ ಅಬ್ಬಿಗೇರಿಯಲ್ಲಿ ಮುಷ್ಟಿ ಧಾನ್ಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿ
* ಮಧ್ಯಾಹ್ನ 3 ಗಂಟೆಗೆ ಗದಗನ ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಭೇಟಿ
* ಸಂಜೆ 4 ಗಂಟೆಗೆ ಗದಗನ ವೀರನಾರಾಯಣನ ದೇವಸ್ಥಾನದಲ್ಲಿ ಪೂಜೆ
* ಸಂಜೆಗೆ ಮತ್ತೆ ಧಾರವಾಡಕ್ಕೆ ವಾಪಸ್, ಮೂರು ಸಾವಿರ ಮಠಕ್ಕೆ ಭೇಟಿ
* ಧಾರವಾಡ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ
* ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ರೈತರೊಂದಿಗೆ ಸಭೆ
* ರಾತ್ರಿ ಹುಬ್ಬಳ್ಳಿಯಲ್ಲಿ ಉದ್ಯಮಿಗಳ ಜೊತೆ ಸಂವಾದ
* ನಾಳೆ ಬಾಗಲಕೋಟೆ, ಬೆಳಗಾವಿಯಲ್ಲಿ ಸಮಾವೇಶ ಮುಗಿಸಿ ವಾಪಸ್