ಹಾಸನ:ಏ-12: ಸಿಎಂ ಸಿದ್ದರಾಮಯ್ಯ ಅಂಡ್ಟೀಂ ಜಿಲ್ಲೆಯಲ್ಲಿ ಏಳೂ ಸ್ಥಾನ ಗೆಲ್ಲಬೇಕು ಎಂದು ವೀರಾವೇಶದ ಮಾತುಗಳನ್ನಾಡಿದ್ದಾರೆ. ಜಿಲ್ಲೆಯ ಆಡಳಿತ ವ್ಯವಸ್ಥೆ ಇಷ್ಟು ಹದಗೆಡಲು ಸಿಎಂ ಕುಮ್ಮಕ್ಕು ಕಾರಣ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಕಿಡಿಕಾರಿದ್ದಾರೆ.
ಹಾಸನದ ಅರಕಲಗೂಡಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಾಜ್ಯ ಸರಕಾರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಾಗೂರು ಮಂಜೇಗೌಡ ಸಿಎಂ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಆ ಸ್ಥಾನದ ಗೌರವ ಕಳೆದುಕೊಂಡು ವರ್ತಿಸು ತ್ತಿದ್ದಾರೆ.
ಸಿಎಂಗೆ ಚುನಾವಣಾ ನೀತಿ ಸಂಹಿತೆ ಲೆಕ್ಕಕ್ಕೆ ಇಲ್ಲದಂತಾಗಿದೆ. ಹಾಸನ ಜಿಲ್ಲೆಯಲ್ಲಿ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಯೋ ಬಗ್ಗೆ ಅನುಮಾನವಿದೆ.
ನಾನು ರಾವತ್ ಜೊತೆ ದೂರವಾಣಿ ಯಲ್ಲಿ ಮಾತನಾಡಿದ್ದೇನೆ… ಮುಖ್ಯ ಕಾರ್ಯದರ್ಶಿ ಸರಕಾರದ ವಿರುದ್ಧ ಮಾತನಾಡಲ್ಲ…
ಏಕೆಂದ್ರೆ ಸಿಎಂ ಅವರಿಗೆ ಲೈಫ್ ಕೊಟ್ಟಿದ್ದಾರೆ… ರಾಜ್ಯದ ಆಡಳಿತ ಯಂತ್ರ ಕೋಡ್ ಆಫ್ ಕಂಡಕ್ಟ್ ಗೆ ಮಾನ್ಯತೆ ಕೊಡದೆ, ಕಡತ ವಿಲೇವಾರಿ ಮಾಡುತ್ತಿದ್ದಾರೆ.. ನಾನು ಮತ್ತೆ ಚುನಾವಣಾ ಆಯೋಗದ ಮುಖ್ಯಸ್ಥರನ್ನು ಭೇಟಿ ಮಾಡುವೆ..
ನಾವು ತಪ್ಪು ಮಾಡಿದ್ದರೆ..ನಮ್ಮೇಲೂ ಕ್ರಮ ಕೈಗೊಳ್ಳಲಿ ನಾನು ಹಾಸನ ಡಿಸಿಯನ್ನು ದುರ್ಬಳಕೆ ಮಾಡಿಕೊಂಡಿಲ್ಲ.. ಡಿಸಿ ನನ್ನ ಸಂಬಂಧಿಕರಲ್ಲ, ಹಾಸನ ಜಿಲ್ಲೆಗೆ ವಿಶೇಷ ತಂಡ ಕಳಿಸುವಂತೆ ಒತ್ತಾಯ ಮಾಡುತ್ತೀನಿ ಎಂದು
ಚುನಾವಣಾ ಆಯೋಗದ ಬಗ್ಗೆಯೂ ಅಸಮಾಧಾ ವ್ಯಕ್ತಪಡಿಸಿದರು.
ಕಮೀಷನರ್ ದು ಆಮೆಯ ನಡೆ ಎಂದು ಬೇಸರ.. ಆಡಳಿತ ಪಕ್ಷದವರು ನಿಮ್ಮ ಧಿಕ್ಕರಿಸಿ ಶರವೇಗದಲ್ಲಿ ಅಕ್ರಮ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು
ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ.. ಕಡ್ಡಾಯವಾಗಿ ಕಾರ್ಯ ಪ್ರವೃತ್ತರಾಗಲು ಆಯೋಗಕ್ಕೆ ಮನವಿ ಮಾಡುತ್ತೀನಿ
ಸಿಎಸ್ ರಾಜ್ಯ ಸರಕಾರ ಪರವಾಗಿದ್ದಾರೆ
ಅವರ ಜೊತೆ ಮತ್ತೊಬ್ಬ ದಕ್ಷ ಅಧಿಕಾರಿ ನಿಯೋಜನೆ ಮಾಡಲಿ ಎಂದು ಮಾಜಿ ಪ್ರಧಾನಿ ಅಭಿಪ್ರಾಯಪಟ್ಟರು