
ಬೆಂಗಳೂರು ಆ12: ಬೆಂಗಳೂರು ಖಾಸಗಿ ಹೋಟೆಲ್ ನಲ್ಲಿ ಊಟ ಮುಗಿಸಿಕೊಂಡು ಬಂದು ಕಾರು ಹತ್ತಿದ ಕೂಡಲೇ ಬಿಜೆಪಿ ಮತ್ತು ಆರ್.ಎಸ್. ಎಸ್ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿ “ಮೋದಿ ಮೋದಿ” ಎಂದು ನಟ ಪ್ರಕಾಶ್ ರೈ ವಿರುದ್ಧ ಕೂಗಿದರು.
ಪ್ರಕಾಶ್ ರೈ ಈ ಹಿಂದೆ ರಾಜಕೀಯಕ್ಕೆ ಬರೋದಿಲ್ಲ ಅಂತ ಹೇಳಿದ್ದು ಇವತ್ತು ಬಿಜೆಪಿಗೆ ಮತ ಹಾಕಬೇಡಿ ಎಂದು ಉಲ್ಟಾ ಹೊಡೆದರು. ಇದರಿಂದ ರೊಚ್ಚಿಗೆದ್ದ ಕೆಲ ಬಿಜೆಪಿ ಮತ್ತು ಆರ್. ಎಸ್. ಎಸ್ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿ ಅವರ ವಿರುದ್ದ ಕೂಗಿದರು.