ಭಾಷ್ ಕಂಪೆನಿ ನೌಕರರೊಬ್ಬರನ್ನು ಅಪಹರಿಸಿ ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಆರು ಮಂದಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೆÇಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಬಂಧಿಸುವಲ್ಲಿ ಯಶಸ್ವಿ

ಬೆಂಗಳೂರು, ಏ.12- ಭಾಷ್ ಕಂಪೆನಿ ನೌಕರರೊಬ್ಬರನ್ನು ಅಪಹರಿಸಿ ಒಂದು ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಆರು ಮಂದಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೆÇಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಅರಕೆರೆ ನಿವಾಸಿ ಸತ್ಯವೇಲಾಚಾರಿ (24) ಹಾಗೂ ಕೋಲಾರದ ಯಶ್ವಂತ್ ಯಾದವ್ (20), ವಿನೋದ್ ಕುಮಾರ್ (21), ಸಂಜಯ್‍ರೆಡ್ಡಿ (20), ಶೇಖರ್ (20) ಮತ್ತು ಜಗನ್ನಾಥ್ (23) ಬಂಧಿತರು.

ಅಪಹರಣಕಾರರಿಂದ ಭಾಷ್ ಕಂಪೆನಿ ನೌಕರ ಶಿವಕುಮಾರ್ ಅವರನ್ನು ರಕ್ಷಿಸಿರುವ ಪೆÇಲೀಸರು, ಅಪಹರಣಕ್ಕೆ ಬಳಸಿದ್ದ ಟಯೋಟಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಭಾಷ್ ಕಂಪೆನಿ ನೌಕರರಾದ ಶಿವಕುಮಾರ್ ಅವರನ್ನು ಏ.8ರಂದು ಮಧ್ಯಾಹ್ನ ಇಂಟೀರಿಯರ್ ಡಿಜೈನ್ ಕೆಲಸ ಮಾಡುವ ಕಂಟ್ರ್ಯಾಕ್ಟರ್ ಜತೆಯಲ್ಲಿ ಬೇರೊಂದು ಕೆಲಸ ಇರುವುದಾಗಿ ಹೇಳಿ ಮನೆಯಿಂದ ಕರೆದುಕೊಂಡು ಹೋಗಿದ್ದು, ರಾತ್ರಿಯಾದರೂ ಹಿಂದಿರುಗಿರಲಿಲ್ಲ.

ಸಂಬಂಧಿಕರು ಮತ್ತು ಸ್ನೇಹಿತರನ್ನು ವಿಚಾರಿಸಲಾಗಿ ಇವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಮಾರನೆ ದಿನ ಬೆಳಗಿನ ಜಾವ ಶಿವಕುಮಾರ್ ಅವರ ಮೊಬೈಲ್‍ನಿಂದ ಯಾರೋ ಕರೆ ಮಾಡಿ ನಿಮ್ಮ ಪತಿಯನ್ನು ಅಪಹರಿಸಿದ್ದು, 1 ಕೋಟಿ ರೂ. ಕೊಟ್ಟು ಬಿಡಿಸಿಕೊಂಡು ಹೋಗುವಂತೆ ಹೇಳಿ ಮೊಬೈಲ್ ಕರೆ ಕಟ್ ಮಾಡಿದ್ದರು. ಇದರಿಂದ ಗಾಬರಿಗೊಂಡ ಶಿವಕುಮಾರ್ ಪತ್ನಿ ತನ್ನ ಸಂಬಂಧಿಕರೊಂದಿಗೆ ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ಸಂಬಂಧ ಅಪಹರಣಗೊಂಡಿರುವ ಶಿವಕುಮಾರ್ ಹಾಗೂ ಆರೋಪಿಗಳ ಪತ್ತೆಗಾಗಿ ಆಗ್ನೇಯ ವಿಭಾಗದ ಉಪ ಪೆÇಲೀಸ್ ಕಮಿಷನರ್ ಡಾ.ಎಂ.ಬಿ.ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಎಸಿಪಿ, ಮೈಕೋ ಲೇಔಟ್ ಎಸಿಪಿ, ಪರಪ್ಪನ ಅಗ್ರಹಾರ ಠಾಣೆ ಇನ್ಸ್‍ಪೆಕ್ಟರ್, ಎಲೆಕ್ಟ್ರಾನಿಕ್ ಸಿಟಿ, ಬೇಗೂರು, ಎಚ್‍ಎಸ್‍ಆರ್ ಲೇಔಟ್ ಪೆÇಲೀಸರ ನೇತೃತ್ವದಲ್ಲಿ ಆರು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿತ್ತು.
ಆರೋಪಿಗಳು ಪರಾರಿಯಾಗಿರುವ ಮಾರ್ಗದಲ್ಲಿನ ಎಲ್ಲ ಚೆಕ್‍ಪೆÇೀಸ್ಟ್‍ಗಳಲ್ಲಿ ದಾಖಲಾಗಿದ್ದ ಮಾಹಿತಿಗಳ ಸಹಾಯದಿಂದ ಆರೋಪಿಗಳು ಕೋಲಾರ ಜಿಲ್ಲೆ ಶ್ರೀನಿವಾಸಪುರ ಹೊರವಲಯದಲ್ಲಿರುವ ಬಗ್ಗೆ ಈ ತಂಡ ಪತ್ತೆ ಹಚ್ಚಿದೆ.

ತಕ್ಷಣ ಸಿನಿಮಾ ರೀತಿಯಲ್ಲಿ ಆರೋಪಿಗಳನ್ನು ಚೇಸ್ ಮಾಡಿ ಪ್ರಮುಖ ಆರೋಪಿ ಯಶ್ವಂತ್ ಯಾದವ್‍ನನ್ನು ಬೆನ್ನಟ್ಟಿ ಹಿಡಿದು ಈತನ ಹೇಳಿಕೆ ಮೇರೆಗೆ ಇನ್ನುಳಿದ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿ ಅಪಹರಣಕ್ಕೊಳಗಾಗಿದ್ದ ಶಿವಕುಮಾರ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾಷ್ ಕಂಪೆನಿಯಲ್ಲಿ ನೌಕರರಾಗಿರುವ ಶಿವಕುಮಾರ್ ಅವರು ಇತ್ತೀಚೆಗೆ ತಮ್ಮ ಮನೆಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಬ್ಯಾಂಕ್‍ನಲ್ಲಿಟ್ಟಿದ್ದರು. ಈ ಹಣದ ಬಗ್ಗೆ ಇವರ ಸ್ನೇಹಿತನಾದ ಸತ್ಯ ಎಂಬುವವನು ತನಗೆ ಹಣದ ಸಮಸ್ಯೆ ಇರುವುದಾಗಿ ಹಣ ನೀಡುವಂತೆ ಕೇಳಿದ್ದಾನೆ. ಇದಕ್ಕೆ ಶಿವಕುಮಾರ್ ಅವರು ಒಪ್ಪದಿದ್ದಾಗ ಅವರ ಜತೆಯಲ್ಲಿಯೇ ಇದ್ದುಕೊಂಡು ಅವರ ಎಲ್ಲ ವ್ಯವಹಾರಗಳನ್ನು ತಿಳಿದುಕೊಂಡಿದ್ದನು.

ಇಂಟೀರಿಯರ್ ಡಿಸೈನ್ ಕಂಟ್ರ್ಯಾಕ್ಟ್ ಮಾಡಿಸುವ ಆರೋಪಿ ಸತ್ಯವೇಲಾಚಾರಿ ತನಗೆ ಇಂಟೀರಿಯರ್ ಡಿಸೈನ್ ಮಾಡಿಸುವ ಕಂಟ್ರ್ಯಾಕ್ಟ್ ಕೊಡಿಸಿ ಎಂದು ತನ್ನ ಸ್ನೇಹಿತ ತಾಜ್‍ಮಿಲ್ ಪಾಷ ಎಂಬುವವರ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾನೆ.
ಈತನ ಮಾತನ್ನು ನಂಬಿದ ಶಿವಕುಮಾರ್ ಅವರು ಪಾಷ ಮನೆಗೆ ಕರೆದುಕೊಂಡು ಹೋದ ನಂತರ ಮೊದಲೇ ಮಾಡಿದ್ದ ಸಂಚಿನಂತೆ ಆರೋಪಿ ಸತ್ಯ ತನ್ನ ಸ್ನೇಹಿತರೊಂದಿಗೆ ಸೇರಿ ಅಪಹರಣದ ನಾಟಕವಾಡಿ ಶಿವಕುಮಾರ್ ಅವರನ್ನು ಜೆಪಿ ನಗರ ಬಳಿಯಿಂದ ಕಾರಿನಲ್ಲಿ ಅಪಹರಿಸಿದ್ದಾರೆ.

ಅಲ್ಲಿಂದ ಕೋಲಾರದ ಹೊರವಲಯ, ಆವಣಿ, ಮುಳಬಾಗಿಲು, ಶ್ರೀನಿವಾಸಪುರ ಪ್ರದೇಶಗಳಲ್ಲಿ ಸುತ್ತಾಡಿಸುತ್ತ ಶಿವಕುಮಾರ್ ಅವರ ಪತ್ನಿ ಜತೆ ದೂರವಾಣಿ ಮುಖಾಂತರ ಸಂಪರ್ಕದಲ್ಲಿದ್ದು, ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದೆ ಹೋದರೆ ಮನೆಗೆ ಗಂಡನ ಡೆಡ್‍ಬಾಡಿ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು.

ತದನಂತರ ಮತ್ತೆ ಕರೆ ಮಾಡಿ ಹಣವನ್ನು ತೆಗೆದುಕೊಂಡು ಸರ್ಜಾಪುರ ಸರ್ಕಲ್‍ಗೆ ಬರುವಂತೆ ಹಾಗೂ ಪೆÇಲೀಸರಿಗೆ ತಿಳಿಸಿದರೆ ನಿನ್ನ ಪತಿಯನ್ನು ಹತ್ಯೆ ಮಾಡುವುದಾಗಿ ತಿಳಿಸಿದ್ದಾರೆ.
ಅದರಂತೆ ಅಂದು ಅವರು ಹೇಳಿದ್ದ ಜಾಗಕ್ಕೆ ಹೋಗಿ ಎಷ್ಟು ಹೊತ್ತು ಕಾದರೂ ಅಪಹರಣಕಾರರು ಬಾರದ ಕಾರಣ ಇವರು ಹಿಂದಿರುಗಿದ್ದರು. ಮತ್ತೆ ಕರೆ ಮಾಡಿದ ಆರೋಪಿಗಳು ನೀನು ಪೆÇಲೀಸರ ಸಹಾಯ ಪಡೆದಿರುತ್ತೀಯ. ನಿನ್ನ ಗಂಡನ ಡೆಡ್‍ಬಾಡಿ ಕಳುಹಿಸಿಕೊಡುವುದಾಗಿ ಹೇಳಿ ದೂರವಾಣಿ ಕರೆಯನ್ನು ಕಟ್ ಮಾಡಿದ್ದರು.
ಅಪಹರಣಕಾರರು ಆಗಿಂದಾಗ್ಗೆ ಶಿವಕುಮಾರ್ ಪತ್ನಿಗೆ ಕರೆ ಮಾಡುತ್ತಿದ್ದ ಜಾಡನ್ನು ಹಿಡಿದ ಈ ತಂಡ ಆರೋಪಿಗಳನ್ನು ಬೆನ್ನಟ್ಟಿ ಕೊನೆಗೂ ಕೋಲಾರ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ