ಪ್ರತಿಯೊಬ್ಬ ನಾಗರಿಕನೂ ತಪ್ಪದೆ ಮತದಾನ ಮಾಡಿದಾಗ ಮಾತ್ರ ಸುಭದ್ರ ಸರ್ಕಾರ ಅಸ್ತಿತ್ವಕ್ಕೆ

 

ಬೆಂಗಳೂರು,ಏ.11- ಪ್ರತಿಯೊಬ್ಬ ನಾಗರಿಕನೂ ತಪ್ಪದೆ ಮತದಾನ ಮಾಡಿದಾಗ ಮಾತ್ರ ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯ. ಈ ದಿಸೆಯಲ್ಲಿ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಲು ಬೆಂಗಳೂರು ನಗರ ಜಿಲ್ಲಾ ಪಂಚಯಿತಿ ವತಿಯಿಂದ ಮತದಾನ ಅರಿವು ಆಂದೋಲನವನ್ನು ಹಮ್ಮಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್.ಅರ್ಚನಾ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾಗಿರುವ ಗ್ರಾಮ, ಪ್ರದೇಶ ಹಾಗೂ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾನದ ಮಹತ್ವ ಕುರಿಂತೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಕಾರ್ಯಾ ಯೋಜನೆಯನ್ನು ರೂಪಿಸಿದ್ದು, ಕರಪತ್ರ ಹಂಚಿಕೆ ಮಾಹಿತಿ ಫಲಕಗಳ ಅನುಷ್ಠಾನ, ಅರ್ಹ ಮತದಾರರ ಹೆಸರು ನೋಂದಣಿ, ಬೀದಿನಾಟಕ, ಕಿರುಚಿತ್ರ ಪ್ರದರ್ಶನ, ಆಕರ್ಷಕ ಜಾಹೀರಾತುಗಳ ಪ್ರದರ್ಶನ, ಜಾಥಾ, ರ್ಯಾಲಿ, ಮಾನವಸರಪಳಿ ಇತ್ಯಾದಿಗಳ ಮೂಲಕ ವ್ಯಾಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಜಾಗೃತಿ ಪ್ರಜ್ಞಾಪತ್ರ ವಿತರಿಸಿ ಹೆಸರು ನೋಂದಣಿಯೊಂದಿಗೆ ಮತದಾನ ಮಾಡುವಂತೆ ಉತ್ತೇಜಿಸಲಾಗಿದೆ.

ಹಾಸ್ಟೆಲ್ ವಿದ್ಯಾರ್ಥಿಗಳ ಮೂಲಕ ತಂದೆ-ತಾಯಿಗಳಿಗೆ ಪತ್ರ ಬರೆಸಿ ಮತದಾನ ಮಾಡುವಂತೆ ಪೆÇೀಷಕರನ್ನು ಜಾಗೃತಿಗೊಳಿಸುವುದರ ಜೊತೆಗೆ ಅರ್ಹ ಯುವ ಮತದಾರರು ಸಹ ತಪ್ಪದೆ, ಮತದಾನ ಮಾಡುವಂತೆ ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರ್ಚನ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ