ಭಾರತದ ಬೃಹತ್ ರಕ್ಷಣಾ ವಸ್ತುಪ್ರದರ್ಶನ: ದೇಶ-ವಿದೇಶಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಅನಾವರಣ

ಚೆನ್ನೈ, ಏ.11-ಭಾರತದ ಬೃಹತ್ ರಕ್ಷಣಾ ವಸ್ತುಪ್ರದರ್ಶನ-ಡಿಫ್‍ಎಕ್ಸ್‍ಪೆÇ ತಮಿಳುನಾಡು ರಾಜಧಾನಿ ಚೆನ್ನೈನ ಹೊರವಲಯದಲ್ಲಿ ಇಂದಿನಿಂದ ಆರಂಭವಾಗಿದ್ದು, ದೇಶ-ವಿದೇಶಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅನಾವರಣಗೊಂಡಿವೆ.
ದೇಶದ ಸೇನಾ ಅತ್ಯಾಧುನೀಕರಣ ಕಾರ್ಯಕ್ರಮದ ಭಾಗವಾಗಿ ಕೋಟ್ಯಂತರ ಡಾಲರ್‍ಗಳ ಒಪ್ಪಂದಗಳಿಗೆ ವೇದಿಕೆಯೂ ಸಜ್ಜಾಗಿದೆ.
ಸೇನಾ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳ ಬೃಹತ್ ಆಮದು ರಾಷ್ಟ್ರವಾದ ಭಾರತವನ್ನು ಮಿಲಿಟರಿ ಸಾಧನಗಳ ತಯಾರಿಕೆಯ ತಾಣವನ್ನಾಗಿದಲು ಈ 10ನೇ ರಕ್ಷಣಾ ವಸ್ತುಪ್ರದರ್ಶನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮುಂದಾಗಿದೆ.
ಚೆನ್ನೈ ಹೊರವಲಯ ಹಾಗೂ ದೇವಳ ನಗರಿ ಮಹಾಬಲಿಪುರಂಗೆ ಸಮೀಪದ ತಿರುವಿಂಡನ್‍ತೈನಲ್ಲಿ ನಾಲ್ಕು ದಿನಗಳ ಕಾಲ ಈ ವಸ್ತುಪ್ರದರ್ಶನ ನಡೆಯಲಿದ್ದು, ನಾಳೆ ಪ್ರಧಾನಿ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ತನ್ನ ಪೂರ್ಣ ಪ್ರಮಾಣದ ರಕ್ಷಣಾ ಸಾಮರ್ಥವನ್ನು ಅನಾವರಣಗೊಳಿಸಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಟ್ವಿಟ್ ಮಾಡಿದ್ದಾರೆ.
ಅಮೆರಿಕ, ಇಂಗ್ಲೆಂಡ್, ರಷ್ಯಾ, ಫ್ರಾನ್, ಜರ್ಮನಿ, ಅಫ್ಘಾನಿಸ್ತಾನ, ಇಸ್ರೇಲ್, ಸ್ವೀಡನ್, ಫಿನ್‍ಲೆಂಡ್, ಇಟಲಿ, ಮಡಗಾಸ್ಕರ್, ಮ್ಯಾನ್ಮಾರ್, ನೇಪಾಳ, ಪೆÇೀರ್ಚುಗಲ್, ವಿಯೆಟ್ನಾಂ ಸೇರಿದಂತೆ 47 ದೇಶಗಳ ಅಧಿಕೃತ ನಿಯೋಗದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ದೇಶಗಳ ಅತ್ಯಾಧುನಿಕ ವಿಮಾನಗಳು, ಕ್ಷಿಪಣಿಗಳು, ಡ್ರೋನ್‍ಗಳು, ಮಾನವರಹಿತ ವಿಮಾನಗಳು, ಯುದ್ದ ಟ್ಯಾಂಕ್‍ಗಳು, ಹೈ-ಟೆಕ್ ಬಂದೂಕುಗಳು, ಬೇಹುಗಾರಿಕೆ ಸಾಧನಗಳು ಪ್ರದರ್ಶನಗೊಳ್ಳಲಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ