ಗೋಲ್ಡ್ಕೋಸ್ಟ್ , ಏ.11- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೆ ಕಾಮನ್ವೆಲ್ತ್ನಲ್ಲಿ ಭಾರತದ ಶ್ರೇಷ್ಠ ಬಾಕ್ಸಿಂಗ್ ಪಟು ಮೇರಿಕೋಮ್ ಶ್ರೀಲಂಕಾದ ಅನುಷಾ ದಿಲ್ರುಕ್ಷನ್ರ ವಿರುದ್ಧ ಸೆಣಿಸಿ ಫೈನಲ್ಗೇರುವ ಮೂಲಕ ಮತ್ತೊಂದು ಸ್ವರ್ಣ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಇಂದಿಲ್ಲಿ ನಡೆದ 48 ಕೆಜಿ ವಿಭಾಗದ ಸೆಮಿಫೈನಲ್ ವಿಭಾಗದಲ್ಲಿ ಮೇರಿ ಕೋಮ್ , ಲಂಕಾದ ಅನುಷಾ ವಿರುದ್ಧ 5-0 ಯಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಉತ್ತಮ ಪಂಚಿಂಗ್ನಿಂದ ಲಂಕಾದ ಅನುಷಾರ ಆಕ್ರಮಣವನ್ನು ಸಮರ್ಥವಾಗಿ ಎದುರಿಸಿದ 5 ಬಾರಿ ವಿಶ್ವ ಚಾಂಪಿಯನ್ಸ್ ಆಗಿರುವ ಕೋಮ್ ತಮ್ಮ ಅನುಭವ ಹಾಗೂ ಚಾಕಚಕ್ಯತೆಯನ್ನು ಪ್ರದರ್ಶಿಸುವ ಮೂಲಕ ಎದುರಾಳಿ ಅಥ್ಲಿಟ್ ಅನ್ನು ಕೆಂಪು ರಿಂಗ್ನಲ್ಲಿ ಸೋಲಿಸಿದರು.
ಎರಡನೇ ಸುತ್ತಿನಲ್ಲಿ ಅನುಷಾ ಕೊಂಚ ಆಕ್ರಮಣಕಾರಿ ಹೊಡೆತಗಳಿಂದ ಗಮನ ಸೆಳೆದರೂ ಮೇರಿಗೆ ಶರಣಾಗತಿಯಾದರು.
ಸರಿತಾಗೆ ಸೋಲು:
ಇಂದಿಲ್ಲಿ ನಡೆದ 60 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಭಾರತದ ಲೈಸ್ರಾಮ್ ಸರಿತಾ ದೇವಿ ಅವರು ಆಸ್ಟ್ರೇಲಿಯಾದ ಅಂಜಾ ಸ್ಟ್ರಿಡ್ಸ್ಮನ್ರನ್ನು ಕ್ವಾಟರ್ಫೈನಲ್ನಲ್ಲಿ ಎದುರಿಸಿದರು.
ಸರಿತಾ ಕೂಡ ಮೇರಿಕೋಮ್ರಂತೆ ಬಾಕ್ಸಿಂಗ್ನ ಎಲ್ಲ ಕಲೆಗಳನ್ನು ಅರಿತಿದ್ದು ಸಮಯಕ್ಕೆ ಸರಿಯಾಗಿ ಎದುರಾಳಿಗಳಿಗೆ ಮಣ್ಣು ಮುಕ್ಕಿಸುವ ಚಾಕಚಕ್ಯತೆಯನ್ನು ಹೊಂದಿದ್ದರಾದರೂ ಮೂರನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಅಂಜಾ ತಮ್ಮ ಎತ್ತರ ಹಾಗೂ ತಮ್ಮ ಬಲಗೈನ ಅದ್ಭುತ ಸಾಮಥ್ರ್ಯದಿಂದ ಗೆಲ್ಲುವ ಮೂಲಕ ಸ್ಥಳೀಯ ಬಾಕ್ಸಿಂಗ್ ಅಭಿಮಾನಗಳ ಮನಗೆದ್ದರು.