![bus](http://kannada.vartamitra.com/wp-content/uploads/2018/04/bus-600x381.jpg)
ಬೆಂಗಳೂರು, ಏ.11- ತಮಿಳುನಾಡಿನಲ್ಲಿ ನಡೆಯುತ್ತಿರುವ ಬಂದ್ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿಯ ಎಲ್ಲಾ ವಿಭಾಗದ ಬಸ್ಗಳ ಸಂಚಾರವನ್ನು ತಡೆ ಹಿಡಿಯಲಾಗಿದೆ.
ಪ್ರತಿ ದಿನ ಬೆಳಗ್ಗೆ ಬೆಂಗಳೂರು, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ವಿಭಾಗದಿಂದ ತಮಿಳುನಾಡಿಗೆ ಹೋಗುತ್ತಿದ್ದ ಸುಮಾರು 250 ಬಸ್ಗಳನ್ನು ಪೆÇಲೀಸರ ಎಚ್ಚರಿಕೆ ವರದಿಯಿಂದಾಗಿ ಇಂದು ಬೆಳಗ್ಗೆಯಿಂದಲೇ ತಡೆ ಹಿಡಿಯಲಾಗಿದೆ ಎಂದು ಕೆಎಸ್ಆರ್ಟಿಸಿ ಮೂಲಗಳು ತಿಳಿಸಿವೆ.
ತಮಿಳುನಾಡು ಗಡಿ ಬಳಿ ಮಾತ್ರ ಬಸ್ಗಳು ಸಂಚರಿಸುತ್ತಿದೆ. ರಾತ್ರಿ ಪಾಳಯದ ಕೆಎಸ್ಆರ್ಟಿಸಿ ಬಸ್ಗಳು ಇಂದು ಬೆಳಗ್ಗೆ ಡಿಪೆÇೀಗಳನ್ನು ಸೇರಿದೆ. ಸಂಜೆ ನಂತರ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಸ್ಗಳ ಸಂಚಾರವನ್ನು ನಿಲ್ಲಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೆಎಸ್ಆರ್ಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಲತಾ ಅವರು ಮನವಿ ಮಾಡಿದ್ದಾರೆ.