ಗೋಲ್ಡ್ಕೋಸ್ಟ್, ಏ.11- ಮಹಿಳೆಯರ ಡಬ್ಬಲ್ ಟ್ರಾಪ್ ವಿಭಾಗದಲ್ಲಿ ಭಾರತದ ಶ್ರೇಯಾಸಿ ಸಿಂಗ್ ಚಿನ್ನದ ಪದಕಕ್ಕೆ ಗುರಿ ಇಟ್ಟು ತಮ್ಮದಾಗಿಸಿಕೊಂಡಿದ್ದಾರೆ.
ನವದೆಹಲಿಯ ಶಾರ್ಪ್ಶೂಟರ್ ಎಂದೇ ಬಿಂಬಿಸಿಕೊಂಡಿರುವ ಶ್ರೇಯಾಸಿ 2014ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲೂ ಕೂಡ ಡಬ್ಬಲ್ ಟ್ರಾಫ್ ವಿಭಾಗದ ಅಂತಿಮ ಸುತ್ತಿನಲ್ಲಿ ಪಾಲ್ಗೊಂಡು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
ಈಗ ಅದೇ ಗುರಿಯನ್ನು ನಿಖರಗೊಳಿಸಿದ ಶ್ರೇಯಾಸಿ ಇಲ್ಲಿ ನಡೆದ ಡಬ್ಬಲ್ ಟ್ರಾಪ್ ವಿಭಾಗದಲ್ಲೂ ಕೂಡ ಚಿನ್ನದ ಪದಕವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಕಾಮನ್ವೆಲ್ತ್ನಲ್ಲಿ ಎರಡು ಸ್ವರ್ಣ ಪದಕವನ್ನು ಗೆದ್ದುಕೊಂಡು ತಮ್ಮ ಸಂತಸವನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ.
ದೆಹಲಿಯ ಹನ್ಸ್ರಾಜ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಶ್ರೇಯಾಸಿ, ಖ್ಯಾತ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಅನ್ನು ಪ್ರದರ್ಶಿಸಿ ಅನೇಕ ಪ್ರಶಸ್ತಿಯನ್ನು ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದ ಕುಮಾರ್ ಸುಂದರ್ ಸಿಂಗ್ಳ ಮೊಮ್ಮಗಳು.
ಈ ವಿಭಾಗದಲ್ಲಿ ಭಾರತದ ವರ್ಷಾ ವರ್ಮಾನ್ ಪಾಲ್ಗೊಂಡಿದ್ದರು ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕವನ್ನು ಕಳೆದುಕೊಂಡು 4ನೆ ಸ್ಥಾನವನ್ನು ಪಡೆದು ನಿರಾಸೆ ಕಂಡರು.