ಗೋಲ್ಡ್‍ಕೋಸ್ಟ್‍ನಲ್ಲಿ ಮಹಿಳಾ ಶೂಟರ್‍ಗಳ ಪಾರಮ್ಯ ಮುಂದುವರೆದಿದೆ

ಗೋಲ್ಡ್‍ಕೋಸ್ಟ್, ಏ.10-ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಶೂಟರ್‍ಗಳ ಪಾರಮ್ಯ ಮುಂದುವರೆದಿದೆ.

25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಹೀನಾ ಸಿಧು ಭಾರತಕ್ಕೆ ಮತ್ತೊಂದು ಬಂಗಾರದ ಪದಕ ದಕ್ಕಿಸಿಕೊಟ್ಟಿದ್ದಾರೆ. ಅಲ್ಲದೆ, ಹೊಸ ಕಾಮನ್‍ವೆಲ್ತ್ ದಾಖಲೆ ಸೃಷ್ಟಿಸಿದ್ದಾರೆ.

28 ವರ್ಷದ ಹೀನಾ ಸಿಧು ಫೈನಲ್ ಸ್ಪರ್ಧೆಯಲ್ಲಿ 38 ಸ್ಕೋರ್‍ಗಳೊಂದಿಗೆ ಆಸ್ಟ್ರೇಲಿಯಾದ ಪ್ರಬಲ ಸ್ಪರ್ಧಿ ಎಲೆನಾ ಗಲಿಯಾಬೋವಿಚ್ ಅವರನ್ನು ಮಣಿಸಿ ಬಂಗಾರದ ಗೆಲುವಿನ ನಗೆ ಬೀರಿದರು.

ಹೀನಾ ಕಾಮೆನ್‍ವೆಲ್ತ್ ಕ್ರೀಡಾಕೂಟದಲ್ಲಿ ಗೆಲ್ಲುತ್ತಿರುವ 2ನೇ ಪದಕ ಇದಾಗಿದೆ. ಈ ಹಿಂದೆ 10 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ರಜತ ಪದಕ ಪಡೆದಿದ್ದರು.
ಭಾರತ ಈವರೆಗೆ ಒಟ್ಟು 20 ಪದಕ ಗಳಿಸಿ ಅಗ್ರ ಶ್ರೇಯಾಂಕದ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 11 ಚಿನ್ನ, 4 ಬೆಳ್ಳಿ ಮತ್ತು 5 ಕಂಚು ಪದಕಗಳು ಭಾರತಕ್ಕೆ ಸಂದಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ