ನವದೆಹಲಿ, ಏ.10- ಅಂಚೆ ಕಚೇರಿಯಲ್ಲಿ ನೀವು ಖಾತೆ ಹೊಂದಿದ್ದಲ್ಲಿ ನಿಮ್ಮ ಖಾತೆಯಿಂದ ಯಾವುದೇ ಬ್ಯಾಂಕ್‍ಗಳಿಗೆ ಹಣ ವರ್ಗಾಯಿಸುವ ಅಥವಾ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಮೇ ತಿಂಗಳ ನಂತರ ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಯಿಂದ ಹಣ ವರ್ಗಾಯಿಸಬಹುದಾಗಿದೆ. ದೇಶದ 34 ಕೋಟಿ ಅಂಚೆ ಖಾತೆದಾರರಿಗೆ ಡಿಜಿಟಲ್ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ದೇಶದ 1.55 ಲಕ್ಷ ಅಂಚೆ ಕಚೇರಿಗಳಿಗೆ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಲಿಂಕ್ ಮಾಡಲು ಕೇಂದ್ರ ಹಣಕಾಸು ಸಚಿವಾಲಯ ಸಮ್ಮತಿಸಿದೆ. ಬ್ಯಾಂಕ್ ಗಳಲ್ಲಿರುವ ಆರ್‍ಟಿಜಿಎಸ್, ನೆಫ್ಟ್ ಇತರೆ ಸೇವೆಗಳನ್ನು ಅಂಚೆ ಕಚೇರಿಯಲ್ಲಿಯೂ ಪಡೆಯಬಹುದಾಗಿದೆ.
ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ವ್ಯವಸ್ಥೆ ಜಾರಿಗೆ ಬಂದಲ್ಲಿ ದೇಶದ ಅತಿ ದೊಡ್ಡ ಬ್ಯಾಂಕಿಂಗ್ ನೆಟ್‍ವರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಪ್ರಸ್ತುತ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಪೇಮೆಂಟ್ ಬ್ಯಾಂಕ್ ವ್ಯವಸ್ಥೆ ಜಾರಿಯಾದಲ್ಲಿ ಬ್ಯಾಂಕ್‍ನಂತೆಯೇ ಎಲ್ಲಾ ಸೇವೆಗಳನ್ನು ಪಡೆಯಬಹುದಾಗಿದೆ.