ಬ್ರಿಸ್ಬೆನ್,ಏ.10-ಆಸ್ಟ್ರೇಲಿಯಾದ ಬ್ರಿಸ್ಟೆನ್ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದ 6ನೇ ದಿನವಾದ ಇಂದು ಭಾರತದ ಪುರುಷ ಶೂಟರ್ಗಳು ನಿರಾಶೆ ಮೂಡಿಸಿದ್ದಾರೆ. ಭಾರತದ ಭರವಸೆಯ ಶೂಟರ್ ಗಗನ್ ನಾರಂಗ್ 50 ಮೀಟರ್ ರೈಫಲ್ ಪೆÇ್ರೀ ಶೂಟಿಂಗ್ನಲ್ಲಿ ಏಳನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು.
ಇದೇ ಚೊಚ್ಚಲ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿರುವ ಚೈನ್ ಸಿಂಗ್ ನಾಲ್ಕನೇ ಸ್ಥಾನ ಗಳಿಸಿದರು. ಇದರೊಂದಿಗೆ ಭಾರತದ ಶೂಟರ್ಗಳು ಆರನೇ ದಿನ ಪದಕ ಗೆಲ್ಲುವುದರಿಂದ ವಂಚಿತರಾಗಿದ್ದಾರೆ.
619.4 ಸ್ಕೋರ್ಗಳೊಂದಿಗೆ ಫೈನಲ್ಗಾಗಿ ಮೂರನೆಯವರಾಗಿ ಅರ್ಹತೆ ಪಡೆದ ನಾರಂಗ್ ನಿರೀಕ್ಷಿತ ಸಾಧನೆ ಪ್ರದರ್ಶಿಸದೇ ಮೊದಲ ಹಂತದಲ್ಲೇ ನಿರ್ಗಮಿಸಿದರು. ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಉತ್ತಮ ಪ್ರದರ್ಶನ ನೀಡಿದ ಚೈನ್ ಸಿಂಗ್ ಇದೇ ವಿಭಾಗದಲ್ಲಿ ನಾಲ್ಕನೇ ಸ್ಥಾನಗಳಿಸಿ ನಾರಂಗ್ಗಿಂಗ ಉತ್ತಮ ಎನಿಸಿಕೊಂಡಿದ್ದು ವಿಶೇಷ.
ಬೆಲ್ಮೊಂಟ್ ಶೂಟಿಂಗ್ ಸೆಂಟರ್ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಡೇವಿಡ್ ಫೆಲ್ಪ್ಸ್ 248.8 ಸ್ಕೋರ್ ದಾಖಲೆಯೊಂದಿಗೆ ಚಿನ್ನ ಗೆದ್ದರು. ಇಂದು ಈ ಗೆಲವು ಅವರಿಗೆ ಇಮ್ಮಡಿ ಖುಷಿ ನೀಡಿತು. 41ನೇ ಜನ್ಮದಿನದಂದೇ ಅವರು ಬಂಗಾರ ಗೆಲುವಿನ ಸಾಧನೆ ಮಾಡಿದ್ದು ವಿಶೇಷ. ಸ್ಕಾಟ್ಲೆಂಟ್ನ ನೀರ್ ಸ್ಟಿರ್ಟಾನ್ ಮತ್ತು ಇಂಗ್ಲೆಂಡ್ನ ಕೆನೆತ್ ಪರ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪದಕಗಳನ್ನು ಕೊರಳಿಗೇರಿಸಿದರು.