ಬೆಂಗಳೂರು, ಏ.10-ಓಲಾ ಕ್ಯಾಬ್ ಚಾಲಕ ಮೇಲೆ ಹಲ್ಲೆ ನಡೆಸಿ ಕಾರು ಹಾಗೂ ಮೊಬೈಲ್ನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ ಇಬ್ಬರು ಸುಲಿಗೆಕೋರರನ್ನು ಮಾಗಡಿರಸ್ತೆ ಠಾಣೆ ಪೆÇಲೀಸರು ಬಂಧಿಸಿ 6.65 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಅಗ್ರಹಾರ ದಾಸರಹಳ್ಳಿಯ ನಿವಾಸಿ ಚೇತನ್ (25) ಮತ್ತು ಬ್ಯಾಡರಹಳ್ಳಿಯ ದಿಲೀಪ್ಕುಮಾರ್ (24) ಬಂಧಿತ ಸುಲಿಗೆಕೋರರು.
ಮಾಗಡಿರಸ್ತೆ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿಯಲ್ಲಿ ಓಲಾ ಕ್ಯಾಬ್ ಚಾಲಕನಿಗೆ ಹಲ್ಲೆ ಮಾಡಿ ಆತನಿಂದ ಸ್ಯಾಮ್ಸಂಗ್ ಮೊಬೈಲ್ ಮತ್ತು ಟೊಯಟಾ ಇಟಿಯೋಸ್ ಕಾರನ್ನು ಸುಲಿಗೆ ಮಾಡಿ ಇಬ್ಬರು ದರೋಡೆಕೋರರು ಪರಾರಿಯಾಗಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿ ಮೊಬೈಲ್ ಹಾಗೂ ಕಾರು ಮತ್ತು ಬಜಾಜ್ ಪಲ್ಸರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ದಿಲೀಪ್ಕುಮಾರ್ ವಿರುದ್ಧ ರಾಜಗೋಪಾಲನಗರ ಪೆÇಲೀಸ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ. ಈತನ ಮೇಲೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕೊಲೆಯತ್ನ, ದರೋಡೆಸಂಚು, ಕಳವು ಪ್ರಕರಣಗಳು ದಾಖಲಾಗಿದೆ.
ಮತ್ತೊಬ್ಬ ಆರೋಪಿ ಚೇತನ್ ವಿರುದ್ಧ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ದರೋಡೆ, ದರೋಡೆಗೆ ಸಂಚು, ರಾಬರಿ ಪ್ರಕರಣಗಳು ದಾಖಲಾಗಿದ್ದು, ಇವರಿಬ್ಬರು ಈ ಹಿಂದೆ ಬಂಧಿತರಾಗಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಗೆ ಬಂದಿದ್ದರೂ ಸಹ ತಮ್ಮ ದುಶ್ಚಟ ಹಾಗೂ ಮೋಜಿನ ಜೀವನಕ್ಕಾಗಿ ಒಟ್ಟಿಗೆ ಸೇರಿ ಸುಲಿಗೆ ಮಾಡುವ ಚಾಳಿವುಳ್ಳವರಾಗಿದ್ದರು.
ಆರೋಪಿಗಳನ್ನು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಪಶ್ಚಿಮ ವಿಭಾಗದ ಉಪಪೆÇಲೀಸ್ ಆಯುಕ್ತ ರವಿ ಡಿ.ಚನ್ನಣ್ಣನವರ್ ಮಾರ್ಗದರ್ಶನದಲ್ಲಿ ಸಹಾಯಕ ಪೆÇಲೀಸ್ ಆಯುಕ್ತ ಪರಮೇಶ್ವರ ಹೆಗಡೆ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಜೀವನ್ ಅವರನ್ನೊಳಗೊಂಡ ತಂಡ ಈ ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿತ್ತು.